ಹರಿನಾರಾಯಣ್ ರಾಜ್ ಭರ್ 
ದೇಶ

ಮಹಿಳೆಯರಂತೆ ಪುರುಷರಿಗೂ ರಾಷ್ಟ್ರೀಯ ಆಯೋಗ ಬೇಕು: ಬಿಜೆಪಿ ಸಂಸದ

ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಲೋಕಸಭಾ ಸದಸ್ಯರೊಬ್ಬರು ಪತ್ನಿಯಿಂದ ಪೀಡನೆಗೊಳಗಾದ ಪುರುಷರಿಗಾಗಿ ರಾಷ್ಟ್ರೀಯ ಪುರುಷರ ಆಯೋಗ ರಚನೆಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನವದೆಹಲಿ: ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಲೋಕಸಭಾ ಸದಸ್ಯರೊಬ್ಬರು ಪತ್ನಿಯಿಂದ  ಪೀಡನೆಗೊಳಗಾದ ಪುರುಷರಿಗಾಗಿ ರಾಷ್ಟ್ರೀಯ ಪುರುಷರ ಆಯೋಗ ರಚನೆಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಉತ್ತರ ಪ್ರದೇಶದ  ಬಿಜೆಪಿ ಸಂಸದ ಹರಿನಾರಾಯಣ್ ರಾಜ್ ಭರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಪುರುಷರ ಶಾಸನಬದ್ಧ ಸಂಸ್ಥೆ ಸಹ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಮನಾದ ಸ್ಥಾನ ಹೊಂದಿರಬೇಕು ಎಂದು ಒತ್ತಾಯಿಸಿದ್ದಾರೆ.
"ರಾಷ್ಟ್ರೀಯ ಮಹಿಳಾ ಆಯೋಗದಂತೆಯೇ ಪುರುಷರ ಆಯೋಗವನ್ನೂ ರಚಿಸಬೇಕು.ನೊಂದ ಪುರುಷರಿಗೆ ಸಹ ಒಂದು ವೇದಿಕೆಯ ಅಗತ್ಯವಿದೆ. ಪ್ರಸ್ತುತ ಸಮಯದಲ್ಲಿ, ಪುರುಷರು ತಮ್ಮ ಹೆಂಡತಿಯರ ಬಳಿ ಎದುರಿಸುವ ಕಷ್ಟಗಳಿಗೆ ಪರಿಹಾರ ಸೂಚಿಸಲು ಯಾವುದೇ ಶಾಸನಬದ್ದ ಸಂಸ್ಥೆಗಳಿಲ್ಲ." ಎ ಎನ್ ಐಗೆ ನಿಡಿದ ಸಂದರ್ಶನದಲ್ಲಿ ರಾಜ್ ಭರ್ ಹೇಳಿದ್ದಾರೆ.
ಕಳೆದ ತಿಂಗಳು ನಡೆದ ಮಾನ್ಸೂನ್ ಅಧಿವೇಶನದಲ್ಲಿ ರಾಜ್ ಭರ್ ಈ ಪ್ರಸ್ತಾಪವನ್ನಿತ್ತಿದ್ದರು. ಇದರ ಬಳಿಕ ಅವರು ದೇಶಾದ್ಯಂತದ ಪುರುಷ ಸಮುದಾಯದ ವ್ಯಾಪಕ ಬೆಂಬಲ ಗಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
 "ನಾನು ದೇಶದ ವಿವಿಧ ಭಾಗಗಳಿಂದ 5000 ಕ್ಕಿಂತ ಹೆಚ್ಚು ಸಂದೇಶಗಳನ್ನು ಪಡೆದಿದ್ದೇನೆ, ವಿದೇಶದಲ್ಲಿ ನೆಲೆಸಿದವರಲ್ಲಿ ಸಹ ಕೆಲವರು  ಕಲ್ಪನೆಯನ್ನು ಬೆಂಬಲಿಸಿದರು ಮತ್ತು ಶಾಸನಬದ್ಧ ಆಯೋಗ ರಚನೆಗೆ ಸೂಚಿಸಿದ್ದಾರೆ" ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?