ಹನನ್ ಹಮೀದ್ 
ದೇಶ

ಕಾಲೇಜು ನಂತರ ಮೀನು ಮಾರುತ್ತಿದ್ದ ವಿದ್ಯಾರ್ಥಿನಿ ಹನನ್ ಹಮೀದ್ ಗೆ ಅಪಘಾತ: ಗಂಭೀರ ಗಾಯ

ಕಾಲೇಜು ಮುಗಿದ ನಂತರ ತನ್ನ ಕುಟುಂಬದವರನ್ನು ಸಾಕಲು ಮೀನು ಮಾರಾಟ ಮಾಡುತ್ತಿದ್ದ ಹನನ್ ಹಮೀದ್ ಕಥೆ ಇತ್ತೀಚೆಗೆ...

ತಿರುವನಂತಪುರ: ಕಾಲೇಜು ಮುಗಿದ ನಂತರ ತನ್ನ ಕುಟುಂಬದವರನ್ನು ಸಾಕಲು ಮೀನು ಮಾರಾಟ ಮಾಡುತ್ತಿದ್ದ ಹನನ್ ಹಮೀದ್ ಕಥೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಹನನ್ ಹಮೀದ್ ರಸ್ತೆ ಅಫಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
ಸೋಮವಾರ ಬೆಳಗ್ಗೆ ಕುಡಂಗಲೂರ್ ನಲ್ಲಿ ಅಪಘಾತ ವಾಗಿದ್ದು,  ಬೆನ್ನಿನ ಮೂಳೆಗೆ ಗಂಭೀರ ಗಾಯಗಳಾಗಿರುವ ಆಕೆಯನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಕೋಜಿಕೋಡ್ ನಲ್ಲಿ ಮಳಿಗೆಯೊಂದನ್ನು ಉದ್ಘಾಟಿಸಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ,  ಹನನ್ ಚಲಿಸುತ್ತಿದ್ದ ಕಾರು, ರಸ್ತೆ ದಾಟುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ರಕ್ಷಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡಿದಿದೆ. ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ, ಹನನ್ ಗೆ ಐಸಿಯು ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಲಯಾಳಂ ನ ಮಾತೃಭೂಮಿ ಪತ್ರಿಕೆಯಲ್ಲಿ ಹನನ್ ಬಡತನದ ಬಗ್ಗೆ ಲೇಖನ ಪ್ರಕಟವಾಗಿ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ