ನವದೆಹಲಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಆರೋಪಿಸಿ ಮಲಯಾಳಂ ಕಾದಂಬರಿ 'ಮೀಶಾ' ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಬರಹಗಾರನ ಕಲ್ಪನೆಯು ಸ್ವಾತಂತ್ರ್ಯವನ್ನು ಆನಂದಿಸಬೇಕು. ಪುಸ್ತಕಗಳಿಗೆ ನಿಷೇಧ ಹೇರುವುದರಿಂದ ಮುಕ್ತ ಅಭಿಪ್ರಾಯಗಳನ್ನು ನಿರ್ಬಂಧಿಸಿದಂತಾಗುತ್ತದೆ ಎಂದಿದೆ.
ಆಗಸ್ಟ್ 2ರಂದು ಕಾದಂಬರಿಕಾರ ಎಸ್ ಹರೀಶ್ ಅವರ 'ಮೀಶಾ' ಕಾದಂಬರಿಯನ್ನು ನಿಷೇಧಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಎನ್ ರಾಧಾಕೃಷ್ಣನ್ ಅವರು, ಕಾದಂಬರಿಯಲ್ಲಿ ಹಿಂದೂ ಮಹಿಳೆಯನ್ನು ಅವಮಾನಿಸಲಾಗಿದೆ ಎಂದು ದೂರಿದ್ದಾರೆ.