ದೇಶ

ಸಲಿಂಗಕಾಮದಿಂದ ಎಚ್ಐವಿ ಹೆಚ್ಚಾಗುತ್ತಾ; ಸೆಕ್ಷನ್ 377 ಬಗ್ಗೆ ಸುಬ್ರಮಣಿಯನ್ ಸ್ವಾಮಿ ಹೇಳಿದ್ದೇನು!

Vishwanath S
ನವದೆಹಲಿ: ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಸಲಿಂಗಕಾಮದಿಂದ ಎಚ್ಐವಿ ಹೆಚ್ಚಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅಂತಿಮವಲ್ಲ. ತೀರ್ಪನ್ನು ಪ್ರಶ್ನಿಸಿ 7 ಮಂದಿ ನ್ಯಾಯಾಧೀಶರ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದೆ. ಆದರೆ ಈ ತೀರ್ಪಿನಿಂದ ದೇಶದಲ್ಲಿ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ರೋಗಗಳ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಎಂದರು. 
ಸಲಿಂಗಕಾಮ ಎನ್ನುವುದು ಅನುವಂಶೀಯ ಅಸ್ವಸ್ಥತೆ. ಹೀಗಾಗಿ ಈ ವ್ಯಕ್ತಿತ್ವ ಹೊಂದಿರುವವರನ್ನು ಸಾಮಾನ್ಯ ಲೈಂಗಿಕ ವರ್ತನೆ ಹೊಂದಿರುವ ವ್ಯಕ್ತಿಗಳ ಜೊತೆ ಹೋಲಿಕೆ ಮಾಡಲು ಬರುವುದಿಲ್ಲ. ಈ ಕುರಿತು ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದರು. 
ಅಮೆರಿಕ ದೇಶದಲ್ಲಿರುವ ಸಂಸ್ಕೃತಿ ನಮ್ಮ ದೇಶದಲ್ಲೂ ಹೆಚ್ಚಾಗುವ ಸಂಭವವಿದ್ದು ಇದರ ಹಿಂದೆ ಸಾಕಷ್ಟು ಹಣದಸ ಹರಿವು ಇದೆ. ಇನ್ನು ಮುಂದೆ ಸಲಿಂಗಕಾಮದ ಬಾರ್ ಗಳು ಆರಂಭವಾಗಬಹುದು. ಇದು ದೇಶದ ಭದ್ರತೆಗೆ ಮಾರಕವಾಗಬಹುದು ಎಂದು ಅಭಿಪ್ರಾಯಪಟ್ಟರು. 
ನನಗೆ ಗೊತ್ತಿದೆ ಹಲವರು ನ್ಯಾಯಾಧೀಶರು ಸಲಿಂಗಕಾಮಿಗಳಾಗಿದ್ದಾರೆ. ಅಷ್ಟೇ ಅಲ್ಲದೇ ಭವಿಷ್ಯದಲ್ಲಿ ಶಿಶುಕಾಮಿಗಳ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕವನ್ನು ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. 
SCROLL FOR NEXT