ದೇಶ

ಸಲಿಂಗಕಾಮದ ಪರ ಸುಪ್ರೀಂ ತೀರ್ಪು ಮಾನವೀಯತೆಗೆ ಸಿಕ್ಕ ಮಹಾಜಯ: ಕರಣ್ ಜೋಹರ್

Shilpa D
ನವದೆಹಲಿ: ಸಲಿಂಗಕಾಮ ಅಪರಾಧವಲ್ಲ ಎಂದು ಮಹತ್ವದ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಇದು ಮಾನವೀಯತೆಗೆ  ಹಾಗೂ ಸಮಾನ ಹಕ್ಕುಗಳಿಗೆ ಸಿಕ್ಕ ಮಹಾಜಯ ಎಂದು ಶ್ಲಾಘಿಸಿದ್ದಾರೆ.
ದೇಶಕ್ಕೆ ಮತ್ತೆ ಆಕ್ಸಿಜನ್ ಸಿಕ್ಕಿದಂತಾಗಿದೆ, ಇದೊಂದು ಐತಿಹಾಸಿಕ ತೀರ್ಪು,  ನನಗೆ ಹೆಮ್ಮೆ ಎನಿಸುತ್ತದೆ,  ಸೆಕ್ಷನ್ 377ರ ವಿಧಿಯ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯುಪೀಠ ವಜಾಗೊಳಿಸಿದ್ದು, ಸಮಾನ ಹಕ್ಕು ಹಾಗೂ ಮಾನವೀಯತೆಗೆ ಸಿಕ್ಕ ಜಯ, ದೇಶ ಮತ್ತೆ ಆಕ್ಸಿಜನ್ ಪಡೆದಿದೆ ಎಂದು ಕರಣ್ ಜೋಹರ್ ಟ್ವೀಟ್ ಮಾಡಿದ್ದಾರೆ. 
ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ ಸಲಿಂಗಕಾಮ ಅಪರಾಧವಲ್ಲ ಎಂಬ ತೀರ್ಪು ನೀಡಿದೆ. ಭಾರತದಲ್ಲಿ ಸಲಿಂಗಕಾಮ ಅಪರಾಧವೋ ಅಥವಾ ಇಲ್ಲವೋ ಎಂದು ಪರಿಗಣಿಸುವ, ಭಾರತೀಯ ದಂಡಸಂಹಿತೆ(ಐಪಿಸಿ) ಸೆಕ್ಷನ್ 377ರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಐಪಿಸಿ ಸೆಕ್ಷನ್ 377ರ ವಿಧಿಗೆ ಯಾವುದೇ ತರ್ಕವಿಲ್ಲ ಎಂದು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿದೆ. ವೈವಿಧ್ಯತೆಯ ಶಕ್ತಿಯನ್ನು ಗೌರವಿಸುವ ಅಗತ್ಯವಿದೆ ಎಂದು ಸಿಜೆಐ ದೀಪಕ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಪೂರ್ವಾಗ್ರಹಗಳಿಗೆ ಇತಿಶ್ರೀ ಹಾಡಬೇಕಾಗಿದ್ದು, ಸಲಿಂಗಕಾಮಿಗಳಿಗೆ ಬೇರೆಯವರಂತೆಯೇ ಹಕ್ಕಿದೆ ಎಂದು ಸುಪ್ರ್ರೀ ತಿಳಿಸಿದೆ.
SCROLL FOR NEXT