ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್
ಚಿಕಾಗೋ: ಉತ್ತಮ ಸಮಾಜಕ್ಕಾಗಿ ವಿಶ್ವದೆಲ್ಲೆಡೆ ಇರುವ ಹಿಂದೂಗಳು ಒಗ್ಗೂಡಬೇಕೆಂದು ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಶುಕ್ರವಾರ ಹೇಳಿದ್ದಾರೆ.
ಚಿಕಾಗೋದಲ್ಲಿ ನಡೆದ ವಿಶ್ವ ಹಿಂದು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಹಿಂದೂ ಸಮುದಾಯದ ಸಾಧನೆಗಳನ್ನುಕೊಂಡಾಡಿದ್ದಾರೆ. ಹಿಂದೂ ಸಮುದಾಯ ಅತ್ಯದ್ಭುತ ಜನಸಂಖ್ಯೆಯನ್ನು ಹೊಂದಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದರೆ, ಹಿಂದೂ ಸಮಾಜ ಪ್ರಗತಿ ಕಾಣಲಿದೆ ಎಂದು ಹೇಳಿದ್ದಾರೆ.
ಉತ್ತಮ ಮಾನವತಾವಾದಿಗಾಗಿ ಹಿಂದೂ ಸಮುದಾಯ ಒಗ್ಗೂಡಿ ಕಾರ್ಯನಿರ್ವಹಿಸಬೇಕು. ನಮ್ಮನ್ನು ವಿರೋಧಿಸುವ ಜನರಿದ್ದಾರೆ. ಅಂತಹವರಿಗೆ ನಾವು ಕೆಡುಕು ಬಯಸಬಾರದು. ಅವರಿಂದ ನೋವನ್ನು ಮಾಡಿಕೊಳ್ಳಬಾರದು ಎಂದು ತಿಳಿಸಿದ್ದಾರೆ.
ಇದೇ ವೇಳೆ 1 ನಿಮಿಷ ಮೌನ ಆಚರಿಸಿ ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.