ದೇಶ

ಟಿಕೆಟ್ ಆಕಾಂಕ್ಷಿಗಳು ಸಾಮಾಜಿಕ ತಾಣದಲ್ಲಿ ಸಕ್ರಿಯವಾಗಿರಬೇಕು: ಆದೇಶ ಹಿಂಪಡೆದ ಕಾಂಗ್ರೆಸ್

Lingaraj Badiger
ಭೋಪಾಲ್: ಕೆಲವು ದಿನಗಳ ಹಿಂದಷ್ಟೇ ಮುಂಬರುವ ವಿಧಾನಸಭೆ ಚನಾವಣೆಯಲ್ಲಿ ಸ್ಪರ್ಧಿಸುವ ಟಿಕೆಟ್ ಆಕಾಂಕ್ಷಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರಬೇಕು ಎಂದು ಹೊರಡಿಸಿದ್ದ ಆದೇಶವನ್ನು ಮಧ್ಯ ಪ್ರದೇಶ ಕಾಂಗ್ರೆಸ್ ಸಮಿತಿ(ಎಪಿಸಿಸಿ) ಶನಿವಾರ ಹಿಂಪಡೆದಿದೆ.
ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದ ಎಲ್ಲಾ ನಿರ್ದೇಶನಗಳನ್ನು ಹಿಂಪಡೆಯಲಾಗಿದೆ ಎಂದು ಎಂಪಿಸಿಸಿ ಉಪಾಧ್ಯಕ್ಷ ಚಂದ್ರಪ್ರಭಾಶ್ ಶೇಖರ್ ಅವರು ಆದೇಶ ಹೊರಡಿಸಿದ್ದಾರೆ.
ಕಳೆದ ಸೆಪ್ಟೆಂಬರ್ 2ರಂದು ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದಂತೆ ಎಂಪಿಸಿಸಿ ಹೊರಡಿಸಿದ್ದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.
ಟಿಕೆಟ್ ಆಕಾಂಕ್ಷಿಗಳು ಫೇಸ್ ಬುಕ್ ನಲ್ಲಿ 15 ಸಾವಿರ ಲೈಕ್ಸ್ ಹಾಗೂ ಟ್ವೀಟರ್ ನಲ್ಲಿ 5 ಸಾವಿರ ಫಾಲೋವೆರ್ ಗಳನ್ನು ಹೊಂದಿರಬೇಕು ಎಂದು ಎಂಪಿಸಿಸಿ ಆದೇಶ ಹೊರಡಿಸಿತ್ತು. ಅಲ್ಲದೆ ಅಭ್ಯರ್ಥಿಗಳು ವಾಟ್ಸ್ ಆಪ್ ನಲ್ಲೂ ಸಕ್ರಿಯವಾಗಿರಬೇಕು ಎಂದು ಸೂಚಿಸಿತ್ತು.
SCROLL FOR NEXT