ರಂದೀಪ್ ಸುರ್ಜೇವಾಲ 
ದೇಶ

ಬಿಜೆಪಿ 50 ವರ್ಷ ಆಳುವ ಹಗಲುಗನಸು ಕಾಣುತ್ತಿದೆ: ಕಾಂಗ್ರೆಸ್

ಬಿಜೆಪಿ ಮುಂದಿನ 50 ವರ್ಷಗಳ ಕಾಲ ಅಧಿಕಾರ ನಡೆಸುವ ಹಗಲುಗನಸು ಕಾಣುತ್ತಿದೆ. ಆದರೆ ಭಾರತ ಉತ್ತರ ಕೋರಿಯಾ...

ನವದೆಹಲಿ: ಬಿಜೆಪಿ ಮುಂದಿನ 50 ವರ್ಷಗಳ ಕಾಲ ಅಧಿಕಾರ ನಡೆಸುವ ಹಗಲುಗನಸು ಕಾಣುತ್ತಿದೆ. ಆದರೆ ಭಾರತ ಉತ್ತರ ಕೋರಿಯಾ ಆಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸೋಮವಾರ ಬಿಜೆಪಿಗೆ ತಿರುಗೇಟು ನೀಡಿದೆ.
ನಮ್ಮ ಪಕ್ಷ ಮುಂದಿನ 50 ವರ್ಷ ಆಡಳಿತ ನಡೆಸಲಿದೆ ಎಂಬ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲ ಅವರು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರು ಹಾಗೂ ಸಂವಿಧಾನ ಮತ್ತು ಅದರ ಮೌಲ್ಯಗಳನ್ನು ನಾಶಪಡಿಸಲು ಬಯಸುವವರು ಮಾತ್ರ ಇಂತಹ ಹೇಳಿಕೆ ನೀಡುತ್ತಾರೆ ಎಂದರು.
ಅಮಿತ್ ಶಾ ಅವರ ಹೇಳಿಕೆ, 'ಮುಂಗೇರಿಲಾಲ್ ಕೆ ಹಸೀನ್ ಸಪ್ನೆ'(ಇದೊಂದು ಪ್ರಸಿದ್ಧ ಧಾರವಾಹಿ, ಇದರಲ್ಲಿ ಪ್ರಮುಖ ಪಾತ್ರಧಾರಿ ಯಾವಾಗಲೂ ಹಗಲುಗನಸು ಕಾಣುತ್ತಾನೆ) ಎಂದು ಸುರ್ವೇವಾಲ ಅವರು ಟೀಕಿಸಿದ್ದಾರೆ.
ಆದರೆ, ಭಾರತ ಉತ್ತರ ಕೋರಿಯಾ ಆಗಲು ಸಾಧ್ಯವೇ ಇಲ್ಲ. ಏಕೆಂದರೆ ಇಲ್ಲಿ ಜಾಗೃತ ಪತ್ರಕರ್ತರು, ಜಾಗೃತ ರಾಜಕೀಯ ಪಕ್ಷಗಳು ಮತ್ತು ಅತ್ಯಂತ ಜಾಗೃತ ಮತದಾರರಿದ್ದು,  ನಿಮ್ಮನ್ನು ಅಧಿಕಾರದಿಂದ ನೆಲಕ್ಕೆ ಉರುಳಿಸಲು ತಡವಾಗುವುದಿಲ್ಲ ಎಂದು ಸುರ್ಜೇವಾಲ ಅವರು ಸುದ್ದಿಗಾರರಿಗೆ ತಿಳಿಸಿದರು.
ನಿನ್ನೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯನ್ನು ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ಮುಂದಿನ 50 ವರ್ಷಗಳ ಕಾಲ ಬಿಜೆಪಿ ದೇಶ ಆಳಲಿದೆ. ಬಿಜೆಪಿಯನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT