ದೇಶ

ಪ್ರಧಾನಿ ಮೋದಿ ಅನಕ್ಷರಸ್ಥ: ಸಂಜಯ್ ನಿರುಪಮ್ ಸಮರ್ಥನೆ

Nagaraja AB

ಮುಂಬೈ : ಮಹಾರಾಷ್ಟ್ರದ ಶಾಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜೀವನ ಕುರಿತ ಕಿರುಚಿತ್ರ ಪ್ರದರ್ಶಿಸುವ ಬಿಜೆಪಿ ಸರ್ಕಾರದ ಕ್ರಮವನ್ನು ಟೀಕಿಸುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ  ಅವರನ್ನು ಅನಕ್ಷರಸ್ಥ ಎಂದು ಕಾಂಗ್ರೆಸ್ ಘಟದ ಮುಖ್ಯಸ್ಥ ಸಂಜಯ್ ನಿರುಪಮ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಈ ಹೇಳಿಕೆಗೆ  ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ   ಬಿಜೆಪಿ ನಾಯಕರು  ಸಂಜಯ್ ನಿರುಪಮ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದರು.

ಈ ಸಂಬಂಧ ಇಂದು  ಸ್ಪಷ್ಟನೆ ನೀಡಿರುವ ಸಂಜಯ್ ನಿರುಪಮ್,  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಮಂತ್ರಿ ದೇವರಲ್ಲ.  ಪ್ರಧಾನಿ ಬಗ್ಗೆ ಕೆಲವು ಜನರು ತಮ್ಮ ಆಸ್ತಿ ಎಂಬಂತೆ ಮಾತನಾಡುತ್ತಾರೆ. ಆದರೆ, ನಾನು ಬಳಸಿದ ಪದಗಳು ಸಮಂಜಸವಾಗಿರಲಿಲ್ಲ ಎಂದರು.

ಒಂದು ವೇಳೆ ಮಕ್ಕಳು ಪ್ರಧಾನಿಯ ಶೈಕ್ಷಣಿಕ ಆರ್ಹತೆ ಕೇಳಿದ್ದರೆ ಅವರಿಗೆ ಏನು ಹೇಳೊದು ? ಜನರಿಗೆ ಪ್ರಧಾನಿ ಶಿಕ್ಷತೆ ಮಟ್ಟ ಗೊತ್ತಿಲ್ಲ. ಏನೇ ಪ್ರಯತ್ನ ಮಾಡಿದ್ದರೂ ದೆಹಲಿ ವಿಶ್ವವಿದ್ಯಾಲಯ ಪ್ರಧಾನಿ ಪದವಿ ಬಗ್ಗೆ ಬಹಿರಂಗಪಡಿಸುತ್ತಿಲ್ಲ. ಅವರು ಅಲ್ಲಿ ವ್ಯಾಸಂಗ ಮಾಡಿದ್ರಾ ಎಂದು ಪ್ರಶ್ನಿಸಿದರು.

ಅನಕ್ಷರಸ್ಥ ಮೋದಿ  ಬಗ್ಗೆ ಶಾಲಾ, ಕಾಲೇಜ್ ಗಳ ವಿದ್ಯಾರ್ಥಿಗಳು ಏನು ಅಧ್ಯಯನ ಮಾಡುತ್ತಾರೆ . ಇದು ನಾಗರಿಕ ಸಮಾಜಕ್ಕೆ ಶೋಭೆ ತರುವಂತಹದ್ದಲ್ಲ, ನರೇಂದ್ರಮೋದಿ ಅವರ ಪದವಿ ಬಗ್ಗೆ ದೇಶದ ಮಕ್ಕಳಿಗೆ ಮಾಹಿತಿ ತಿಳಿದಿಲ್ಲ ಎಂದು ಬುಧವಾರ ಸಂಜಯ್ ನಿರುಪಮ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

SCROLL FOR NEXT