ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ತಂದೆಯಿಂದ ರಸ್ತೆಗುಂಡಿ ಮುಚ್ಚುವ ಕಾಯಕ!

ಮೂರು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತನ್ನ ಮಗನನ್ನು ಕಳೆದುಕೊಂಡ ದಾದಾರಾವ್ ಬಿಲ್ಹೊರೆ...

ದಾದಾರಾವ್ ಬಿಲ್ಹೊರೆ
Lingaraj Badiger
Updated On : 14 Sept 2018, 10:06 am
ಮುಂಬೈ: ಮೂರು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತನ್ನ ಮಗನನ್ನು ಕಳೆದುಕೊಂಡ ದಾದಾರಾವ್ ಬಿಲ್ಹೊರೆ ಅವರು ಪುತ್ರನ ಸ್ಮರಣಾರ್ಥವಾಗಿ ಪ್ರತಿವರ್ಷ ನೂರಾರು ಮಂದಿಯನ್ನು ಬಲಿಪಡೆಯುತ್ತಿರುವ ಮುಂಬೈನ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾಯಕದಲ್ಲಿ ತೊಡಗಿದ್ದಾರೆ.
ಬಿಲ್ಹೊರೆ ಅವರ ಪುತ್ರ 16 ವರ್ಷದ ಪ್ರಕಾಶ್ ಅವರು 2015ರ ಜುಲೈ 28ರಂದು ಬೈಕ್ ಸಮೇತ ಆಳವಾದ ರಸ್ತೆ ಗುಂಡಿಗೆ ಬಿದ್ದು ಮೃತಪಟ್ಟಿದ್ದರು. 
ಮುಂಬೈನ ಜೋಗೇಶ್ವರಿ ವಿಖ್ರೋಲಿ ಲಿಂಕ್ ರೋಡ್(ಜೆವಿಎಲಾರ್)ನಲ್ಲಿ ಈ ಅಪಘಾತ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರಕಾಶ್ ತಂದೆ, ನನ್ನ ಮಗನಿಗಾದ ಸ್ಥಿತಿ ಯಾರಿಗೂ ಬರಬಾರದು. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ಕಳೆದ ಮೂರು ವರ್ಷಗಳ ಸುಮಾರು 600ಕ್ಕೂ ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ. ಈ ಮೂಲಕ 48 ವರ್ಷದ ತರಕಾರಿ ವ್ಯಾಪಾರಿ ದಾದಾರಾವ್ ಬಿಲ್ಹೊರೆ ಅವರು ತಮ್ಮ ಪ್ರೀತಿಯ ಪುತ್ರನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

Advertisement

Advertisement

ನನ್ನ ಮಗನಂತೆ ಯಾರೂ ತಮ್ಮ ಜೀವ ಕಳೆದುಕೊಳ್ಳಬಾರದು. ಜನ ಇನ್ನು ಮುಂದೆ ಇಂತಹ ಸಮಸ್ಯೆಗಳನ್ನು ಎದುರಿಸಬಾರದು. ಹೀಗಾಗಿ ರಸ್ತೆ ಗುಂಡಿ ಮುಕ್ತ ಭಾರತವಾಗುವವರೆಗೆ ನಾನು ಈ ಕೆಲಸ ಮಾಡುತ್ತೇನೆ. ಹೆಚ್ಚು ಜನಸಂಖ್ಯೆ ಇರುವ ದೇಶ ನಮ್ಮದಾಗಿದೆ. ಹೀಗಾಗಿ ಇದರಲ್ಲಿ ಒಂದು ಲಕ್ಷ ಜನ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ರೆ, ನಮ್ಮದು ರಸ್ತೆ ಗುಂಡಿ ಮುಕ್ತ ದೇಶವಾಗುದ್ರಲ್ಲಿ ಯಾವುದೇ ಸಂಶಯವಿಲ್ಲ ಅಂತ ಬಿಲ್ಹೊರೆ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement