ಅಹಮದಾಬಾದ್: ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಓದ್ದಾಡುತ್ತಿರುವ ಯುವಕರು ಒಂದೆಡೆಯಾದರೆ. ಇತ ಮ್ಯಾಟ್ರಿಮೊನಿಯಲ್ ವೆಬ್ ಸೈಟ್ ಮೂಲಕ ಬರೋಬ್ಬರಿ 50 ಮಹಿಳೆಯರನ್ನು ವಂಚಿಸಿದ್ದಾನೆ.
ಶಾಲೆ ತೊರೆದ ನಿವೃತ್ತ ಸೇನಾ ಕರ್ನಲ್ ಪುತ್ರ 42 ವರ್ಷದ ಜುಲಿಯನ್ ಸಿನ್ಹಾ ಅಲಿಯಾಸ್ ಸಿದ್ದಾರ್ಥ್ ಮೆಹ್ರಾ ಮ್ಯಾಟ್ರಿಮೊನಿಯಲ್ ವೆಬ್ ಸೈಟ್ ನಲ್ಲಿ ತಾನೊಬ್ಬ ಸೇನೆಯ ಮೇಜರ್ ತನಗೆ ಹೊಂದುವಂತಾ ವಧುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಪೋಸ್ಟ್ ಮಾಡಿದ್ದಾನೆ.
ಭೀಕರ ಅಪಘಾತವೊಂದರಲ್ಲಿ ಸಿನ್ಹಾ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ ಕಾಲುಗಳಿಗೆ ಗಂಭೀರ ಗಾಯವಾಗಿತ್ತು. ನಡೆಯಲು ಏನು ತೊಂದರೆ ಇಲ್ಲದಿದ್ದರು. ದೈಹಿಕವಾಗಿ ಸದೃಢವಾಗಿರಲಿಲ್ಲ. ಹೀಗಾಗಿ ಆತ ಇತರ ವೆಬ್ ಸೈಟ್ ಗಳಲ್ಲಿನ ಹ್ಯಾಂಡ್ ಸಮ್ ಹುಡುಗರ ಫೋಟೋಗಳನ್ನು ಸಂಗ್ರಹಿಸಿ ತನ್ನ ವೆಬ್ ಸೈಟ್ ಗಳಲ್ಲಿ ಹಾಕಿಕೊಳ್ಳುತ್ತಿದ್ದ.
ಮ್ಯಾಟ್ರಿಮೊನಿಯಲ್ ನಲ್ಲಿ ಸಿನ್ಹಾ ಆರ್ಮಿ ಮೇಜರ್ ಎಂಬುದನ್ನು ಕಂಡ ವಧುಗಳು ಮದುವೆ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಈ ವೇಳೆ ಸಿನ್ಹಾ ತನ್ನ ಬುದ್ಧಿಯನ್ನು ಉಪಯೋಗಿಸಿ ಅದು ಇದು ಅಂತಾ ಕಾರಣ ನೀಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ. ಹೀಗೆ 50 ಸಾವಿರ ಹಣ ನೀಡಿ ಕಳೆದುಕೊಂಡ ವಧು ಒಬ್ಬಳು ಪೊಲೀಸರಿಗೆ ದೂರ ನೀಡಿದ್ದು ಈ ಸಂಬಂಧ ಪೊಲೀಸರು ಸಿನ್ಹಾನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics