ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಯಾವುದೂ ಉಚಿತವಾಗಿ ಸಿಗುವುದಿಲ್ಲ: ಚೀನಾ ನೆರವಿನ ಬಗ್ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಯಾವುದೂ ಉಚಿತವಾಗಿ ಸಿಗುವುದಿಲ್ಲ ಎಂಬುದನ್ನು ಚೀನಾದಿಂದ ಆರ್ಥಿಕ ನೆರವು ಪಡೆಯುತ್ತಿರುವ ರಾಷ್ಟ್ರಗಳು ಅರ್ಥಮಾಡಿಕೊಳ್ಳಬೇಕೆಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಯಾವುದೂ ಉಚಿತವಾಗಿ ಸಿಗುವುದಿಲ್ಲ: ಚೀನಾ ನೆರವಿನ ಬಗ್ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್
Srinivas Rao BV
Updated On : 17 Sept 2018, 5:38 am
ಪುಣೆ: ಯಾವುದೂ ಉಚಿತವಾಗಿ ಸಿಗುವುದಿಲ್ಲ ಎಂಬುದನ್ನು ಚೀನಾದಿಂದ ಆರ್ಥಿಕ ನೆರವು ಪಡೆಯುತ್ತಿರುವ ರಾಷ್ಟ್ರಗಳು ಅರ್ಥಮಾಡಿಕೊಳ್ಳಬೇಕೆಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. 
ಬಿಐಎಂಎಸ್ ಟಿಇಸಿ ಮಿಲಿಟರಿ ತಾಲೀಮು 18 ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್,  ಚೀನಾ-ನೇಪಾಳ ಮಿತ್ರತ್ವ ಹೆಚ್ಚುತ್ತಿರುವುದರ ಬಗ್ಗೆಯೂ ಸೂಕ್ಷ್ಮವಾಗಿ ಮಾತನಾಡಿದ್ದು, ಯವುದೇ ಸಹಾಯವೂ ಉಚಿತವಾಗಿ ಸಿಗುವುದಿಲ್ಲ ಎಂಬುದನ್ನು ಚೀನಾದಿಂದ ಆರ್ಥಿಕ ನೆರವು ಪಡೆದುಕೊಳ್ಳುತ್ತಿರುವ ರಾಷ್ಟ್ರಗಳು ಮನದಟ್ತು ಮಾಡಿಕೊಳ್ಳಬೇಕು, ಇದಕ್ಕೆ ಉತ್ತಮ ಉದಾಹರಣೇಯೆಂದರೆ ಅಮೆರಿಕ-ಪಾಕಿಸ್ತಾನ ಸಂಬಂಧ. ಅಮೆರಿಕ-ಪಾಕ್ ಸಂಬಂಧ ಈ 70 ವರ್ಷಗಳ ಹಿಂದಿನ ಸಂಬಂಧ ಈಗ ಉಳಿದಿಲ್ಲ. ಹಾಗೆಯೇ ಈ ರೀತಿಯ ತಾತ್ಕಾಲಿಕ ಮೈತ್ರಿಗಳ ಬಗ್ಗೆ ನಾವು ಹೆದರಬೇಕಿಲ್ಲ, ನಮ್ಮ ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಬೇಕಿದೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement