ದೇಶ

'ಕ್ಯಾಂಪಸ್ ಕೇಸರಿಕರಣ' ವಿರುದ್ಧ ಪಾಂಡಿಚೇರಿ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ, ಪರೀಕ್ಷೆಗಳು ಅಮಾನತು

Raghavendra Adiga
ಪಾಂಡಿಚೇರಿ: ಕೇಸರಿಕರಣಕ್ಕೆ ಉತ್ತೇಜನ ಹಾಗೂ ಜಾತ್ಯಾತೀತ ನಿಲುವಿನ ಕಡೆಗಣನೆಯನ್ನು ಖಂಡಿಸಿ ಪಾಂಡಿಚೇರಿ ವಿಶ್ವವಿದ್ಯಾನಿಲಯದ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಆಡಳಿತ ವಿರುದ್ಧ ಅನಿರ್ದಿಷ್ಠಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ. ಅಧಿಕಾರಿಗಳು ತಮ್ಮ ಮುಕ್ತ ವಾಕ್ ಸ್ವಾತಂತ್ರದ ಹಕ್ಕು ಹಾಗೂ ಅನ್ಯಾಯದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಏಳು ವಿದ್ಯಾರ್ಥಿ ಸಂಘಟನೆಗಳು ಸೇರಿ ನಡೆಸುತ್ತಿರುವ ಮುಷ್ಕರದ ಆಯೋಜಕರು ದೂರಿದ್ದಾರೆ.
ತಮ್ಮ ಬೇಡಿಕೆ ಆಲಿಸುವುದಕ್ಕೆ ಆಡಳಿತ ಮಂಡಳಿ ಸಭೆ ಕರೆಯುವುದು ತಡವಾದರೆ ಆಡಳಿತ ಮಂಡಳಿ ಹಾಗೂ ಉಪ ಕುಲಪತಿಗಳ ವಿರುದ್ಧ ಘೇರಾವ್ ಹಾಕುವುದಕ್ಕೆ ಯೋಜಿಸಲಾಗಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಯೊಬ್ಬರು ಹೇಳಿದ್ದಾರ್ತೆ. ಆದಾಗ್ಯೂ, ಯೂನಿವರ್ಸಿಟಿ ರಿಜಿಸ್ಟ್ರಾರ್ ಅವರು ವಿದ್ಯಾರ್ಥಿಗಳೊಡನೆ ಂಆತುಕತೆ ನಡೆಸಿದ್ದಾರೆ.
ವಿದ್ಯಾರ್ಥಿನಿಯರಿಗೆ ತ್ತಮ ಭದ್ರತೆ, ಕುಡಿಯುವ ನೀರಿನ ಸರಿಯಾದ ಪೂರೈಕೆ ಮತ್ತು ಕ್ಯಾಂಪಸ್ ನ;ಲ್ಲಿ  ವೈಫೈ ಸಂಪರ್ಕ - ಇವು ಪ್ರತಿಭಟನಾನಿರತರ ಇತರೆ ಬೇಡಿಕೆಗಳಾಗಿದೆ.ಅಧಿಕಾರಿಗಳು ಹೊರಬಂದು ತಮ್ಮ ಬೇಡಿಕೆಗಳನ್ನು ತಿಳಿಯುವವರೆಗೆ ನಾವು ತರಗತಿಗೆ ಪ್ರವೇಶಿಸುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ ಬಳಿಕ ಸೋಮವಾರ ಆರಂಭವಾಗಬೇಕಾಗಿದ್ದ ಇಂಟರ್ನಲ್ ಪರೀಕ್ಷೆಗಳನ್ನು ಆಡಳಿತ ಮಂಡಳಿ ರದ್ದು ಮಾಡಿದೆ.
"ಈ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ, ವಿದ್ಯಾರ್ಥಿ ಸಂಘಟನೆಗೆ ವಿರುದ್ಧವಾಗಿ ರಾಜಕೀಯ ಚಟುವಟಿಕೆಗಳನ್ನು ನಿಷೇಧಿಸುವ ಹೊಸ ನಿಯಮಗಳನ್ನು ಆಡಳಿತವು ಜಾರಿಗೆ ತಂದಿದೆ.ಅದರಂತೆ ಸಂಜೆ 6:30ರ ಬಳಿಕ ಯಾವ ಸಭೆಗಳಿಗೆ ಅನುಮತಿ ಇಲ್ಲ" ಮೊದಲ ವರ್ಷದ ಎಮ್ಎ ಸೌತ್ ಏಷ್ಯನ್ ಸ್ಟಡೀಸ್ ವಿದ್ಯಾರ್ಥಿ  ಅಭಿಜಿತ್ ಸುಧಾಕರನ್ ಹೇಳಿದ್ದಾರೆ.
ಏತನ್ಮಧ್ಯೆ, ಪೊಲೀಸ್ ಸಿಬ್ಬಂದಿ ಕ್ಯಾಂಪಸ್ ಪ್ರವೇಶಿಸಿದ್ದಾರೆ. ಪರಿಸ್ಥಿತಿ ಹತೋಟಿಗೆ ಮುಂದಾಗಿದ್ದಾರೆ.
SCROLL FOR NEXT