ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯಪ್ರದೇಶ ಚುನಾವಣಾ ಪ್ರಚಾರಕ್ಕೆ ಸೆ.17 ರಂದು ಚಾಲನೆ ನೀಡಿದ್ದಾರೆ.
ರೋಡ್ ಶೋ ನಡೆಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿರುವ ರಾಹುಲ್ ಗಾಂಧಿಗೆ ಸ್ಥಳೀಯ ನಾಯಕರಾದ ಕಮಲ್ ನಾಥ್, ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇತರರು ಸಾಥ್ ನೀಡಿದ್ದಾರೆ.
ಏರ್ ಪೋರ್ಟ್ ಬಳಿ ಇರುವ ಲಾಲ್ಘಟಿ ಚೌಕ್ ನಿಂದ ರೋಡ್ ಶೋ ಪ್ರಾರಂಭಿಸಿದ ರಾಹುಲ್ ಗಾಂಧಿ ಸುಮಾರು 18 ಕಿಮೀ ಮೆರವಣಿಗೆಯಲ್ಲಿ ತೆರಳಲಿದ್ದು 4 ಗಂಟೆ ವೇಳೆಗೆ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ.