ಚತ್ತೀಸ್ ಗಢ: ಚತ್ತೀಸ್ ಗಢ ವಿಧಾನಸಭಾ ಚುನಾವಣೆಗೆ ಬಹುಜನ ಸಮಾಜವಾದಿ ಪಕ್ಷ (ಬಿಎಸ್ ಪಿ) ನಾಯಕಿ ಮಾಯಾವತಿ ಸ್ಥಳೀಯ ಪಕ್ಷ ಜನತಾ ಕಾಂಗ್ರೆಸ್ ನೊಂದಿಗೆ ಮೈತ್ರಿಗೆ ಮುಂದಾಗಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮಾಯಾವತಿ ಬಿಎಸ್ ಪಿ 35 ಸ್ಥಾನದ್ಲಲಿ ಚುನಾವಣೆಗೆ ಸ್ಪರ್ಧಿಸಲಿದ್ದು, ಅಜಿತ್ ಜೋಗಿ ನೇತೃತ್ವದ ಜನತಾ ಕಾಂಗ್ರೆಸ್ ಚತ್ತೀಸ್ ಗಢ (ಜೆಸಿಸಿ) 55 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು ಅಜಿತ್ ಜೋಗಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿದ್ದಾರೆ ಎಂದು ಹೇಳಿದ್ದಾರೆ.
2000-2003 ಅವಧಿಯಲ್ಲಿ ಅಜಿತ್ ಜೋಗಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು, ನಂತರ ಜನತಾ ಕಾಂಗ್ರೆಸ್ ಚತ್ತೀಸ್ ಗಢ ಪಕ್ಷ ಸ್ಥಾಪಿಸಿದ್ದರು.