ದೇಶ

ಕಣಿವೆ ರಾಜ್ಯದಲ್ಲಿ ಉಗ್ರರಿಂದ ನಾಲ್ವರು ಪೊಲೀಸರ ಅಪಹರಣ

Srinivasamurthy VN
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಹೆಚ್ಚಾಗಿದ್ದು. ಮತ್ತೆ ನಾಲ್ಕು ಮಂದಿ ಪೊಲೀಸರನ್ನು ಅಹಪರಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ರಾತ್ರಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ನಲ್ಲಿ ಮೂರು ಮಂದಿ ವಿಶೇಷ ಪೊಲೀಸ್ ಅಧಿಕಾರಿಗಳನ್ನು ಹಾಗೂ ಓರ್ವ ಪೊಲೀಸ್ ಸಿಬ್ಬಂದಿಯನ್ನು ಶಂಕಿತ ಭಯೋತ್ಪಾದಕರು ಅಪಹರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಭಯೋತ್ಪಾದಕರು ಪೊಲೀಸರಿಗೆ ಎಚ್ಚರಿಕೆ ನೀಡಿದ್ದು, ಅವರನ್ನು ವೃತ್ತಿಯಿಂದ ರಾಜೀನಾಮೆ ನೀಡುವಂತೆ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂರು ವಾರಗಳಲ್ಲಿ ಕಾಶ್ಮೀರದಲ್ಲಿ ದಾಖಲಾಗಿರುವ 8ನೇ ಪ್ರಕರಣ ಇದಾಗಿದ್ದು, ಇಂದು ಮತ್ತೆ ನಾಲ್ಕು ಮಂದಿ ಪೊಲೀಸರನ್ನು ಉಗ್ರರು ಅಹಪರಣ ಮಾಡಿದ್ದಾರೆ. 
ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಮನಕ್ಕೆ ಸೇನೆ ಜತೆ ಪೊಲೀಸರು ಕೈಜೋಡಿಸಿರುವುದು ಭಯೋತ್ಪಾದಕರ ನಿದ್ದೆಗೆಡಿಸಿದೆ. ಹೀಗಾಗಿ ಉಗ್ರರು ಪೊಲೀಸರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಮುಸ್ಲಿಂ ಸಮುದಾಯದ ಪೊಲೀಸರನ್ನು ಸೇವೆಯಿಂದ ರಾಜೀನಾಮೆ ಪಡೆಯುವಂತೆ ಉಗ್ರರು ಬೆದರಿಕೆದ್ದಾರೆ ಎಂದು ತಿಳಿದುಬಂದಿದೆ.
SCROLL FOR NEXT