ಹೈದರಬಾದ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಆಯೂಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡಿದ್ದು ಈ ಯೋಜನೆಯಿಂದ ತೆಲಂಗಾಣ ಹೊರಕ್ಕೆ ಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆರೋಗ್ಯ ಯೋಜನೆಯಾದ ಆಯೂಷ್ಮಾನ್ ಭಾರತ್ ಗೆ ಚಾಲನೆ ಸಿಕ್ಕಿದ್ದು ತೆಲಂಗಾಣ ಈ ಯೋಜನೆಯನ್ನು ಅಳವಡಿಸಿಕೊಳ್ಳುವುದಿಲ್ಲ. ಕಾರಣ ಅದಾಗಲೇ ರಾಜ್ಯದಲ್ಲಿ ಆರೋಗ್ಯಶ್ರೀ ಯೋಜನೆ ಜಾರಿಯಲ್ಲಿದ್ದು ಈ ಯೋಜನೆಯಲ್ಲಿ ಸುಮಾರು 70 ಲಕ್ಷ ಕುಟುಂಬಗಳು ಒಳಗೊಂಡಿದೆ. ಹೀಗಾಗಿ ಕೇಂದ್ರ ಸರ್ಕಾರದ ಯೋಜನೆಯನ್ನು ತೆಲಂಗಾಣದಲ್ಲಿ ಅಳವಡಿಸಿಕೊಳ್ಳಲುವುದಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಆರೋಗ್ಯಶ್ರೀ ಯೋಜನೆಯನ್ನೇ ಮುಂದುವರೆಸಲಾಗುವುದು ಹೀಗಾಗಿ ಆಯೂಷ್ಮಾನ್ ಭಾರತ್ ಯೋಜನೆ ನಾವು ಅಳವಡಿಸಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ್(ಪಿಎಂಜೆಎವೈ) ವಾರ್ಷಿಕವಾಗಿ ಪ್ರತಿ ಕುಟುಂಬಕ್ಕೆ 5 ಲಕ್ಷ ರು.ಗಳನ್ನು ಒದಗಿಸಲು ಉದ್ದೇಶಿಸಿದೆ. ಈ ಯೋಜನೆಯಿಂದ 10 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಲಾಭವಾಗಲಿದೆ.