ನವದೆಹಲಿ: ಇಷ್ಟವಿಲ್ಲದ ಮದುವೆಯಾಗಿ ಆತನೊಂದಿಗೆ ಎರಡು ವರ್ಷಗಳಿಂದ ಸಂಸಾರ ಮಾಡಿ ಕೊನೆಗೆ ಕೋಪದಲ್ಲಿ ಗಂಡ ನಾಲಿಗೆಯನ್ನು 8 ತಿಂಗಳ ಗರ್ಭಿಣಿ ಕಚ್ಚಿ ಗಾಯ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ರಣಹೋಲಾ ಪ್ರದೇಶದಲ್ಲಿ ಕಳೆದ ರಾತ್ರಿ ಗಂಡ-ಹೆಂಡತಿ ನಡುವೆ ಸಣ್ಣ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಪತ್ನಿ ಸಿಟ್ಟಿನಿಂದ ಕುಳಿತ್ತಿದ್ದಾಗ, ಸಮಾಧಾನ ಮಾಡಲು ಆತ ಪತ್ನಿಗೆ ಮುತ್ತಿಡಲು ಮುಂದಾಗಿದ್ದಾನೆ. ಈ ವೇಳೆ ಆಕೆ ಕೋಪದಲ್ಲಿ ಆತನ ಅರ್ಧ ನಾಲಿಗೆಯನ್ನು ಕಚ್ಚಿದ್ದು ನಾಲಿಗೆಗೆ ಗಂಭೀರ ಗಾಯವಾಗಿದೆ.
ಗಂಡ ನೋಡಲು ಚನ್ನಾಗಿಲ್ಲ ಅಂತ ಪತ್ನಿ ಮನೆಯಲ್ಲಿ ಆತನ ಜೊತೆ ಗಲಾಟೆ ಮಾಡುತ್ತಿದ್ದಳು. ಇದೇ ರೀತಿ ಶನಿವಾರ ಆತ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾಗ ಮತ್ತೆ ಪತ್ನಿ ಜಗಳ ಮಾಡಿದ್ದು ಈ ವೇಳೆ ಈ ಘಟನೆ ನಡೆದಿದೆ.
ಸದ್ಯ ಗಂಭೀರವಾಗಿ ಗಾಯಗೊಂಡಿರುವ 22 ವರ್ಷದ ಗಂಡನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾತನಾಡಲು ಸಾಧ್ಯವಾಗದೆ ಇರುವುದರಿಂದ ಆತ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾನೆ.