ಪಾಟ್ನಾ: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಶೌಚಾಲಯ ಬಾಗಿಲು ತೆರೆಯುವ ಬದಲು ವಿಮಾನ ಆಗಸದಲ್ಲಿ ಹಾರುತ್ತಿದ್ದಾಗಲೇ ತುರ್ತು ನಿರ್ಗಮನ ದ್ವಾರ ತೆಗೆಯಲು ಪ್ರಯತ್ನಿಸಿದ ವಿಚಿತ್ರ ಘಟನೆ ಗೋ ಏರ್ ವಿಮಾನದಲ್ಲಿ ನಡೆದಿದೆ. ದೆಹಲಿ-ಪಾಟ್ನಾ ನಡುವೆ ಸಂಚರಿಸುವ ಗೋ ಏರ್ ವಿಮಾನ ಜಿ 8 149 ನಲ್ಲಿ ಸೆಪ್ಟೆಂಬರ್ 22ರಂದು ಈ ಘಟನೆ ನಡೆದಿತ್ತು.
ಘಟನೆ ನಡೆದ ವಿಮಾನದಲ್ಲಿ ಒಟ್ಟು 150 ಪ್ರಯಾಣಿಕರಿದ್ದು ವ್ಯಕ್ತಿ ತಾನು ಶೌಚಾಲಯಕ್ಕೆ ತೆರಳಬೇಕೆಂದು ನಿರ್ಧರಿಸಿದ್ದು ತಾನು ಶೌಚಾಲಯದ ಬಾಗಿಲು ತೆರೆಯುತ್ತಿದ್ದೇನೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಆತ ವಿಮಾನದ ತುರ್ತು ದ್ವಾರ ತೆರೆಯಲು ಯತ್ನಿಸಿದ್ದಾನೆ. ಈ ವೇಳೆ ಕೆಲವರಿಗೆ ಗಾಯಗಳಾಗಿದೆ.
ವ್ಯಕ್ತಿಯ ಅಚಾತುರ್ಯ ಗಮನಿಸಿದ ಸಹ ಪ್ರಯಾಣಿಕರು ತಕ್ಷಣ ವಿಮಾನಾ ಸಿಬ್ಬಂದಿಯನ್ನು ಕರೆದು ಎಚ್ಚರಿಸಿದ್ದಾರೆ. ಆತ ಬಂದೊಡನೆ ತುರ್ತು ದ್ವಾರ ತೆರೆಯುವ ಪ್ರಯತ್ನದಲ್ಲಿದ್ದ ವ್ಯಕ್ತಿಯನ್ನು ಇತರರ ನೆರವಿನೊಡನೆ ತಡೆಯಲು ಯಶಸ್ವಿಯಾಗಿದ್ದಾನೆ.
ವಿಮಾನ ಪಾಟ್ನಾ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ವ್ಯಕ್ತಿಯನ್ನು ಏರ್‌ಪೋರ್ಟ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣ್ಗೊಳಪಡಿಸಲಾಗಿದೆ.
ರಾಜಸ್ಥಾನದ ಅಜ್ಮೀರ್ ನಲ್ಲಿನ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿರುವ ವ್ಯಕ್ತಿ ತಾನು "ತಪ್ಪಾಗಿ" ಭಾವಿಸಿ ತುರ್ತು ನಿರ್ಗಮನ ದ್ವಾರ ತೆರೆಯಲು ಮುಂದಾಗಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪಾಟ್ನಾ ಏರ್ಪೋರ್ಟ್ ಪೋಲಿಸ್ ಸ್ಟೇಶನ್ ಹೌಸ್ ಆಫೀಸರ್ ಮೊಹಮ್ಮದ್ ಸನೋವರ್ ಖಾನ್ ಹೇಳಿದರು.
ವ್ಯಕ್ತಿ ಇದೇ ಪ್ರಥಮ ಬಾರಿಗೆ ವಿಮಾನಯಾನ ಕೈಗೊಂಡಿದ್ದ ಎನ್ನಲಾಗಿದ್ದು ವಿಚಾರಣೆ ಮುಗಿದ ಬಳಿಕ ಪಟ್ನಾದಲ್ಲಿನ ಕನ್ಕಾರ್‌ಬಾಗ್ ಪ್ರದೇಶದಲ್ಲಿ ನೆಲೆಸಿರುವ ಆತನ ಕುಟುಂಬದವರೊಡನೆ ತೆರಳಲು ಅವನಿಗೆ ಅನುಮತಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos