ದೇಶ

ಹೈದರಾಬಾದ್: ವಿಮಾನದಲ್ಲಿ ಉಸಿರಾಟದ ಸಮಸ್ಯೆ, 11 ತಿಂಗಳ ಮಗು ಸಾವು

Raghavendra Adiga
ಹೈದರಾಬಾದ್: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಉಸಿರಾಟದ ಸಮಸ್ಯೆಯುಂಟಾಗಿ ಹನ್ನೊಂದು ತಿಂಗಳ ಮಗುವೊಂದು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಕತಾರ್ ಏರ್ ವೇಸ್ ಗೆ ಸೇರಿದ್ದ ವಿಮಾನದಲ್ಲಿ ದೋಹಾದಿಂದ ಹೈದರಾಬಾದ್ ಗೆ ಪ್ರಯಾಣಿಸುತ್ತಿದ್ದ  ಅರ್ನವ್ ವರ್ಮಾ ಅಲ್ಲೂರಿ ಎನ್ನುವ ಮಗು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದೆ.
ಮಗುವಿನ ತಂದೆ ಅನಿಲ್ ವರ್ಮಾ ಭಾರತ ಪಾಸ್ ಪೋರ್ಟ್ ಹೊಂದಿದ್ದರೆ ಮಗು ಅರ್ನವ್ ಅಮೆರಿಕಾ ಪಾಸ್ ಪೋರ್ಟ್ ಹೊಂದಿದ್ದನು.
ಹೈದರಾಬಾದ್ ನಲ್ಲಿ ಇಳಿದ ತಕ್ಷಣ ಮಗುವನ್ನು ವಿಮಾನ ನಿಲ್ದಾಣದಲ್ಲಿದ್ದ ಅಪೋಲೋ ಮೆಡಿಕಲ್ ಸೆಂಟರ್ ಗೆ ಕರೆದೊಯ್ಯಲಾಗಿತ್ತಾದರೂ ಮಗುವು ಅಷ್ಟರಲ್ಲೇ ಪ್ರಾಣ ಬಿಟ್ಟದ್ದಾಗಿ ಅಲ್ಲಿನ ವೈದ್ಯರು ಘೋಷಿಸಿದ್ದಾರೆ.
ಅರ್ನವ್ ರಾತ್ರಿ 2.29ಕ್ಕೆ ಮೃತಪಟ್ಟಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯ ಬಳಿಕ ವೈದ್ಯರು ಹೇಳಿದ್ದಾರೆ. 
SCROLL FOR NEXT