ರಾಜನಾಥ್ ಸಿಂಗ್ 
ದೇಶ

ರಫೇಲ್ ಕುರಿತು ಜನರ ದಾರಿತಪ್ಪಿಸಿ, ಕೊನೆಗೆ ರಾಹುಲ್ 'ರಾ-ಫೇಲ್' ಆಗುತ್ತಾರೆ: ರಾಜನಾಥ್ ಸಿಂಗ್

ರಾಫೆಲ್ ವಿವಾದದ ಸಂಬಂಧ ದೇಶದ ಜನರನ್ನು ತಪ್ಪು ದಾರಿಗೆಳೆಯಲು ಮುಂದಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಡೆಗೆ ತಾವೇ ರಾ-ಫೇಲ್' ಆಗುತ್ತಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಕೊಚ್ಚಿನ್:: ರಾಫೆಲ್ ವಿವಾದದ ಸಂಬಂಧ ದೇಶದ ಜನರನ್ನು ತಪ್ಪು ದಾರಿಗೆಳೆಯಲು ಮುಂದಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಡೆಗೆ ತಾವೇ ರಾ-ಫೇಲ್' ಆಗುತ್ತಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 
 ಪ್ರಧಾನಿಯನ್ನು ಕುರಿತು "ಅವಹೇಳನಕಾರಿ" ಪದಬಳಕೆ ಮಾಡದಂತೆ ರಾಹುಲ್ ಗೆ ಕಾಂಗ್ರೆಸ್ಸಿಗರು ಸಲಹೆ ನೀಡಬೇಕು ಎಂದು ಸಿಂಗ್ ಹೇಳಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿ ಮೋದ್ಗೆ "ಚೋರ್" ಎಂದು ಕರೆದಿರುವುದುಅರ ಹಿನ್ನೆಲೆಯಲ್ಲಿ ಸಿಂಗ್ ಈ ರೀತಿ ಪ್ರತಿಕ್ರಯಿಸಿದ್ದಾರೆ.
"ಇದು ರಾಫೆಲ್ ಅಲ್ಲ, 'ರಾ-ಫೇಲ್ ಆಗಿದೆ.ಅವರು ವಿಫಲರಾಗಲಿದ್ದಾರೆ.ರಾಹುಲ್ ಗಾಂಧಿ ರಾಫೆಲ್ ಒಪ್ಪಂದದ ಬಗ್ಗೆ ಸತ್ಯ ತಿಳಿದಿದ್ದಾರೆ  ಆದರೆ ಜನರನ್ನು ತಪ್ಪು ದಾರಿಗೆಳೆಯಲು ಅವರು ಪ್ರಯತ್ನಿಸುತ್ತಿದ್ದಾರೆ." ಕೇರಳ ಬಿಜೆಪಿ ರಾಜ್ಯ ಮಟ್ಟದ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡು ರಾಜನಾಥ್ ಸಿಂಗ್ ಮಾತನಾಡಿದ್ದಾರೆ.
ಪಿ.ಎಸ್.ಶ್ರೀಧರನ್ ಪಿಳ್ಳೈ ಅವರನ್ನು ಕೇರಳ ಬಿಜೆಪಿಯ ಹೊಸ ಮುಖ್ಯಸ್ಥರಾಗಿ ನೇಮಕ ಮಾಡಿದ್ದು ಅವರ ನೇಮಕಾತಿಯನ್ನು ಅನುಮೋದಿಸಲು ಸಭೆ ಸೇರಲಾಗಿತ್ತು.
"ನೀವು ಸತ್ಯವನ್ನು ತಿಳಿದಿರುವಿರಿ ಆದರೆ ನೀವು ತಿಳಿದೋ ತಿಳಿಯದೆಯೋ ನೀವು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದೀರಿ" ಸಿಂಗ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಪೋಲೀಸರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆ ವೇಳೆ ನಡೆಯಬೇಕಾಗಿದ್ದ ಭಾರತ-ಪಾಕ್ ವಿದೇಶಾಂಗ ಸಚಿವರ ಮಟ್ಟದ ಮಾತುಕತೆಯನ್ನು ಭಾರತ ರದ್ದುಗೊಳಿಸಿತ್ತು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಪಾಕ್  ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಹುಸೈನ್ ಭಾರತ ರಾಫೆಲ್ ಹಗರಣದಿಂದ ಜನರ ಮನಸ್ಸನ್ನು ಬೇರತ್ತ ತಿರುಗಿಸಲಿಕ್ಕಾಗಿ ಈ ಮಾತುಕತೆ ರದ್ದುಗೊಳಿಸಿತ್ತು ಎಂದಿದ್ದರು.
ಅದ್ ಅಲ್ಲದೆ ರಾಫೆಲ್ ಒಪ್ಪಂದ ಸರಿಯಾದ ರೀತಿಯಲ್ಲಿ ನಡೆದಿದ್ದಾದರೆ ರಾಹುಲ್ ಭಾರತದ ಮುಂದಿನ ಪ್ರಧಾನಿ ಆಗಲಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಆಂತರಿಕ ಸಚಿವ ರೆಹಮಾನ್ ಮಲಿಕ್ ಹೇಳಿಕೆ ನಿಡಿದ್ದರು.
"ನೀವು ಅನೇಕ ಬಾರಿ ಸುಳ್ಳನ್ನು ಪುನರಾವರ್ತಿಸಿದರೆ, ಜನರು ಅದನ್ನು ನಂಬುವುದಕ್ಕೆ ಪ್ರಾರಂಭಿಸುತ್ತಾರೆ., ರಾಫೆಲ್ ವಿಷಯದಲ್ಲಿ ವಿರೋಧ ಪಕ್ಷದವರು ಇದನ್ನೇ ಮಾಡುತ್ತಿದ್ದಾರೆ" ರಾಜನಾಥ್ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!