ಸಂಗೀತ್ ಸೋಮ್ 
ದೇಶ

ಉತ್ತರ ಪ್ರದೇಶ: ಮೀರತ್ ಬಿಜೆಪಿ ಶಾಸಕ ಸಂಗೀತ್ ಸೋಮ್ ಮನೆ ಮೇಲೆ ಗ್ರೆನೇಡ್ ದಾಳಿ

ಮುಜಾಫರ್ ನಗರ್ ದಂಗೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಉತ್ತರ ಪ್ರದೇಶ ಮೀರತ್ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ಮೀರತ್ ನಿಉವಾಸದ ಮೇಲೆ ಅಪರಿಚಿತರಿಂದ ಗ್ರೆನೇಡ್ ದಾಳಿ ನಡೆದಿದೆ.

ಮೀರತ್: ಮುಜಾಫರ್ ನಗರ್ ದಂಗೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಉತ್ತರ ಪ್ರದೇಶ ಮೀರತ್ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ಮೀರತ್ ನಿಉವಾಸದ ಮೇಲೆ ಅಪರಿಚಿತರಿಂದ ಗ್ರೆನೇಡ್ ದಾಳಿ ನಡೆದಿದೆ.
ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ಮೀರತ್ ಪೋಲೀಸರು ಮಾಹಿತಿ ನೀಡಿದರು.
ಗುರುವಾರ ಬೆಳಗಿನ ಜಾವ ಒಂದರ ಸುಮಾರಿಗೆ ಮೀರತ್ ನ ಲಾಲ್  ಕುರ್ತಿ ಪ್ರದೇಶದಲ್ಲಿನ ಶಾಸಕರ ನಿವಾಸದ ಮೇಲೆ ಗ್ರೆನೇಡ್ ದಾಳಿ ನಡೆದಿದೆ. ಅದೃಷ್ಟ ವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೋಲೀಸರು ಹೇಳಿದರು.
ಶಾಸಕ ಸಂಗೀತ್ ಸೋಮ್ ಮನೆಗೆ ಆಗಮಿಸಿದ ಕೆಲವೇ ನಿಮಿಷಗಳಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. 
ದಾಳಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ, ತನಿಖೆ ಪ್ರಗತಿಯಲ್ಲಿದೆ ಎಂದು ಎಸ್​ಎಸ್​ಪಿ ಅಖಿಲೇಶ್​ ಕುಮಾರ್​ ಹೇಳಿದರು. ಇದು ಭಯೋತ್ಪಾದಕ ಕೃತ್ಯವಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.
"ನಾನು ಇತ್ತೀಚಿನ ದಿನಗಳಲ್ಲಿ ಯಾರೊಡನೆ ದ್ವೇಷ, ಮನಸ್ತಾಪ ಹೊಂದಿಲ್ಲ. ನನಗೆ ಯಾರಿಂದಲೂ ಜೀವ ಬೆದರಿಕೆಯೂ ಇಲ್ಲ. ದಾಳಿ ನಡೆಸಿದವರು ಯಾರು, ಏಕೆ ದಾಳಿಯಾಗಿದೆ ಎನ್ನುವುದು ತಿಳಿಯುತ್ತಿಲ್ಲ"  Z-ವರ್ಗದ ಭದ್ರತೆ ಹೊಂದಿರುವ ಶಾಸಕ ಸೋಮ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT