ನವದೆಹಲಿ: ವಿಶ್ವಸಂಸ್ಥೆಯು ನೀಡುವ ' ಚಾಂಫಿಯನ್ ಆಪ್ ದಿ ಅರ್ಥ್ ಪ್ರಶಸ್ತಿಯನ್ನು ರಾಷ್ಟ್ರಕ್ಕೆ ಸಮರ್ಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ವಿಶ್ವಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಪ್ರಶಸ್ತಿ ವೈಯಕ್ತಿಕವಾಗಿ ಬಂದಿಲ್ಲ ಆದರೆ, ಶತಮಾನಗಳ ಮೂಲಕ ಬಂದಿರುವ ಭಾರತದ ದೊಡ್ಡ ಸಂಪ್ರದಾಯ , ಪ್ರಕೃತಿಯೊಂದಿಗೆ ಸಹಜೀವನದಂತಹ ಚಿಂತನಾ ಮೌಲ್ಯಗಳಿಂದ ಬಂದಿರುವುದಾಗಿ ಮೋದಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.