ಒಡಿಶಾ: ಹದಗೆಟ್ಟ ರಸ್ತೆಗಳು ಒಡಿಶಾದಲ್ಲಿನ ಬಹುಮುಖ್ಯ ಸಮಸ್ಯೆಗಳೊಂದಾಗಿದೆ. ಸಮರ್ಪಕ ರಸ್ತೆ ಇಲ್ಲದ ಕಾರಣ ಸೂಕ್ತ ವೇಳೆಯಲ್ಲಿ ಚಿಕಿತ್ಸೆ ದೊರೆಯದೆ ಅನೇಕ ರೋಗಿಗಳು ಜೀವ ಬಿಡುವಂತಾಗಿದೆ.
ತುರ್ತು ಚಿಕಿತ್ಸೆಗೆ ಸ್ಪಂದಿಸಲು 102 ಮತ್ತು 108 ಆಂಬ್ಯುಲೆನ್ಸ್ ಸೇವೆ ಇದ್ದರೂ ಸರಿಯಾದ ರಸ್ತೆ ಇಲ್ಲದ ಕಾರಣ ಅವುಗಳು ಇದ್ದು ಇಲ್ಲದಂತಾಗಿದೆ. ಗರ್ಭೀಣಿಯರನ್ನು ಮಲಗಿದ ಹಾಸಿಗೆಯಲ್ಲಿಯೇ ಅಥವಾ ಸ್ಕೂಟರ್, ಸೈಕಲ್ ಗಳ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ.
ಇತ್ತೀಚಿಗಷ್ಟೇ ಬಾಲಸೂರು ಹಾಗೂ ನಾಬರಂಗಪುರ ಜಿಲ್ಲೆಯಲ್ಲಿ ಇಬ್ಬರು ಗರ್ಭೀಣಿಯರನ್ನು ಕೆಟ್ಟ ರಸ್ತೆಯಿಂದಾಗಿ ಆಂಬ್ಯುಲೆನ್ಸ್ ಸೇವೆ ದೊರೆಯದೆ ಮಲಗಿದ ಹಾಸಿಗೆ ಮೇಲೆಯೇ ಆಸ್ಪತ್ರೆಗೆ ರವಾನಿಸಲಾಗಿತ್ತು.
ಈ ಘಟನೆ ಬೆನ್ನಲ್ಲೇ ಇಂದು ಮಯೂರ್ ಬಂಜ್ ನಲ್ಲಿ ರೋಗಿಯೋರ್ವರನ್ನು ಚಿಕಿತ್ಸೆಗಾಗಿ ಗ್ರಾಮಸ್ಥರು ಹಾಸಿಗೆ ಮೇಲೆಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಭಾರಿ ಮಳೆಯಿಂದಾಗಿ ರಸ್ತೆಗಳೆಲ್ಲಾ ಕೆಸರು ಗದ್ದೆಯಂತಾಗಿದ್ದು, ಐದಾರು ಮಂದಿ ಗ್ರಾಮಸ್ಥರು ಕಾನನದಂತಿರುವ ಪ್ರದೇಶದಲ್ಲಿ ರೋಗಿಯೊಬ್ಬರನ್ನು ಅವರು ಮಲಗಿದ ಹಾಸಿಗೆ ಹಿಡಿದೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಚಿಕಿತ್ಸೆ ಒದಗಿಸಿದ್ದಾರೆ.