ದೇಶ

ಪುಂಛ್ ಬಳಿ ಪಾಕ್ ಗುಂಡಿನ ದಾಳಿ: ಬಿಎಸ್ ಎಫ್ ಯೋಧ ಹುತಾತ್ಮ

Nagaraja AB

ಜಮ್ಮು-ಕಾಶ್ಮೀರ: ಪುಂಛ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಪಾಕಿಸ್ತಾನ ಸೈನಿಕರು  ಬೃಹತ್ ರೀತಿಯಲ್ಲಿ ಶೆಲ್ ದಾಳಿ ನಡೆಸಿದ್ದರಿಂದ ಗಡಿ ಭದ್ರತಾ ಪಡೆಯ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ. ಗುಂಡಿನ ದಾಳಿಯಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ

 ಈ ಘಟನೆಯಲ್ಲಿ ಆರು ಸೈನಿಕರು ಸೇರಿದಂತೆ  ಹನ್ನೋಂದು ಮಂದಿ ಗಾಯಗೊಂಡಿದ್ದಾರೆ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಶಹಪುರ್ ಬಳಿಯ ಗ್ರಾಮದ ಮನೆಗಳ ಬಳಿ ಇಂದು ಮಧ್ಯಾಹ್ನ ಶೆಲ್ ಸ್ಪೋಟಿಸಿದ್ದರಿಂದ  ಸೊಬಿಯಾ ಎಂಬ ಬಾಲಕಿ  ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಪಾಕಿಸ್ತಾನ ಸೈನಿಕರು  ನಡೆಸಿದ ಶೆಲ್ ದಾಳಿಯಿಂದಾಗಿ ಆರು ಮನೆಗಳು ತೀವ್ರವಾಗಿ ಹಾನಿಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ 120 ಎಂಎಂ ಮೋರ್ಟಾರ್ ಬಾಂಬ್ ಗಳನ್ನು ಬಳಸುತ್ತಿದೆ. ಇದರಿಂದಾಗಿ ಗಡಿ ಪ್ರದೇಶದಲ್ಲಿನ ಜನರು ಆತಂಕಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೃಷ್ಣಘಾಟಿ ಕೆರ್ನಿ, ಮ್ಯಾನ್ ಕೊಟ್, ಗುಲ್ಪುರ್ , ದೇಗ್ವಾರ್ ಶಹಪುರ್ ಮತ್ತು ಪುಂಛ್ ಉಪ ಸೆಕ್ಟರ್ ವಲಯಗಳಲ್ಲಿ  ಪಾಕಿಸ್ತಾನ ಸೇನೆಯಿಂದ ತೀವ್ರ ರೀತಿಯ ಶೆಲ್ ದಾಳಿ ನಡೆಯುತ್ತಿದೆ. ಪೊಂಛ್ ಹಾಗೂ ರಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನ ಸತತ ನಾಲ್ಕನೇ ದಿನವೂ ಕದನ ವಿರಾಮ ಉಲ್ಲಂಘಿಸಿದೆ.
ಮುಂಜಾಗ್ರತಾ ಕ್ರಮವಾಗಿ ಶೆಲ್ ದಾಳಿ ಪೀಡಿತ ಪ್ರದೇಶಗಳಲ್ಲಿ ಎಲ್ಲಾ ಶಾಲೆಗಳನ್ನು  ಮುಚ್ಚಲಾಗಿದೆ ಎಂದು ಅವರು ತಿಳಿಸಿದ್ದಾರೆ.
SCROLL FOR NEXT