ಗುವಾಹಟಿಯ ಎನ್ಆರ್ಸಿ ಸೇವಾ ಕೇಂದ್ರದಲ್ಲಿ ಅಸ್ಸಾಂನ ರಾಷ್ಟ್ರೀಯ ರಿಜಿಸ್ಟರ್ ಅಂತಿಮ ಕರಡಿನಲ್ಲಿ ಜನರು ತಮ್ಮ ಹೆಸರುಗಳನ್ನು ಪರಿಶೀಲಿಸಿದ್ದರು
ನವದೆಹಲಿ: ಅಸ್ಸಾಂನಲ್ಲಿ ವಿದೇಶೀಯರ ಬಂಧನ ಪ್ರಕರಣದಲ್ಲಿ ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಈ ಸಂಬಂಧ ವಿಚಾರಣೆಗಾಗಿ ಏಪ್ರಿಲ್ 8 ರಂದು ರಾಜ್ಯ ಮುಖ್ಯ ಕಾರ್ಯದರ್ಶಿ ಹಾಜರಾಗಬೇಕೆಂದು ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ಅಸ್ಸಾಂ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್ ವಿಚಾರಣೆ ನಡೆಸಿದ್ದು ಇದುವರೆಗೆ ಸರ್ಕಾರ ಎಷ್ಟು ಸಂಖ್ಯೆಯ ಜನರನ್ನು ವಿದೇಶಿಗರು ಹಾಗೂ ಸ್ಥಳೀಯ ಬುಡಕಟ್ಟಿನವರೆಂದು ಘೋಷಿಸಿದೆ ಎನ್ನುವ ಅಂಕಿ ಅಂಶವನ್ನು ತಿಳಿಯಲು ನ್ಯಾಯಾಲಯ ಬಯಸಿದೆ.
ಸ್ಥಳೀಯ ಜನರೊಡನೆ ಸೇರಿಕೊಂಡಿರುವ ವಲಸಿಗರ ಸಂಖ್ಯೆ ಎಷ್ಟು? ಇದನ್ನು ತಿಳಿಯಲಿಕಾಗಿ ನಾವು ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ನಿರ್ದೇಶಿಸುತ್ತೇವೆ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರು ಒಳಗೊಂಡಿದ್ದ ಪೀಠ ಹೇಳಿದೆ. ಅದೇ ವೇಳೆ ಸರ್ಕಾರದ ಅಧಿಕಾರಿಗಳಿಲ್ಲದ್ದನ್ನು ಗಮನಿಸಿದ ಪೀಠ ಅಧಿಕಾರಿಗಳ ಗೈರಿನ ಕುರಿತೂ ಅಸಮಾಧಾನ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ಇದೀಗ ಮುಖ್ಯ ಕಾರ್ಯದರ್ಶಿಗೆ ಏಪ್ರಿಲ್ 8 ರಂದು ಕೋರ್ಟ್ ಗೆ ಹಾಜರಾಗಲು ನಿರ್ದೇಶಿಸಿ ಅರ್ಜಿಯನ್ನು ಆ ದಿನಕ್ಕೆ ಮುಂದೂಡಿದೆ.
ಅಸ್ಸಾಂನಲ್ಲಿ ಬಂಧನ ತಾಣ (ಜೈಲುಗಳ) ಸ್ಥಿತಿಗತಿ, ಅಲ್ಲಿ ವಿದೇಶಿಗಳ ದೀರ್ಘಾವಧಿಯ ಬಂಧನಕ್ಕೆ ಸಂಬಂಧಿಸಿದಂತೆ ಮನವಿಯೊಂದನ್ನು ಕೋರ್ಟ್ ವಿಚಾರಣೆ ನಡೆಸಿತ್ತು. ರಾಜ್ಯದಲ್ಲಿ ಎಷ್ಟು ಜೈಲುಗಳಲ್ಲಿ ವಿದೇಶಿಗರನ್ನು ಬಂಧಿಸಿಟ್ಟಿದ್ದೀರಿ ಎಂದಲ್ಲದೆ ಇನ್ನೂ ಹಲವು ವಿಚಾರದ ಕುರಿತು ತಿಳಿಸಲು ಕೇಂದ್ರ ಸರಕಾರವನ್ನು ಸುಪ್ರೀಂ ಕೋರ್ಟ್ ಕೇಳಿದೆ.