ದೇಶ

ಅಧಿಕಾರಕ್ಕೆ ಬಂದರೆ ಚುನಾವಣಾ ಆಯೋಗವನ್ನು ಜೈಲಿಗೆ ಕಳಿಸುವೆ: ಪ್ರಕಾಶ್ ಅಂಬೇಡ್ಕರ್

Srinivas Rao BV
ಯವತ್ಮಲ್: ದಲಿತ ನಾಯಕ ಹಾಗೂ ಮೂರು ಬಾರಿ ಸಂಸದರಾಗಿರುವ ಪ್ರಕಾಶ್ ಅಂಬೇಡ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಯವತ್ಮಲ್ ನಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಕಾಶ್ ಅಂಬೇಡ್ಕರ್, ಚುನಾವಣಾ ಆಯೋಗವನ್ನೇ 2 ದಿನಗಳ ಕಾಲ ಜೈಲಿಗೆ ಕಳಿಸುವುದಾಗಿ ಹೇಳಿದ್ದಾರೆ. ಈ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ.
ಪುಲ್ವಾಮ ಭಯೋತ್ಪಾದಕ ದಾಳಿ ಬಗ್ಗೆ ಮಾತನಾಡಲು ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಅವಕಾಶ ನೀಡದ ಬಗ್ಗೆ ಪ್ರಕಾಶ್ ಅಂಬೇಡ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪುಲ್ವಾಮ ದಾಳಿಯಲ್ಲಿ 40 ಯೋಧರನ್ನು ಕಳೆದುಕೊಂಡೆವು. ಆದರೆ ಸುಮ್ಮನೆ ಕುಳಿತಿದ್ದೇವೆ. ಪುಲ್ವಾಮ ದಾಳಿ ಬಗ್ಗೆ ಮಾತನಾಡದೇ ಇರುವಂತೆ ಸೂಚನೆ ನೀಡಲಾಗಿದೆ. ಚುನಾವಣಾ ಆಯೋಗ ನಮ್ಮನ್ನು ಹೇಗೆ ಕಟ್ಟುಹಾಕುವುದಕ್ಕೆ ಸಾಧ್ಯ? ಸಂವಿಧಾನ ನಮಗೆ ಮಾತನಾಡುವ ಹಕ್ಕು ನೀಡಿದೆ. ನಾನು ಬಿಜೆಪಿಯಲ್ಲ ಅಧಿಕಾರಕ್ಕೆ ಬಂದರೆ ಚುನಾವಣಾ ಆಯೋಗವನ್ನೇ 2 ದಿನ ಜೈಲಿಗೆ ಕಳಿಸುತ್ತೇನೆ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದರು.
ಪ್ರಕಾಶ್ ಅಂಬೇಡ್ಕರ್ ಹೇಳಿಕೆಯನ್ನು ಗಮನಿಸಿರುವ ಚುನಾವಣಾ ಆಯೋಗ, ಸ್ಥಳೀಯ ಅಧಿಕಾರಿಗಳಿಂದ ವರದಿ ಕೇಳಿದೆ. 
SCROLL FOR NEXT