ನರೇಂದ್ರ ಮೋದಿ 
ದೇಶ

ಪ್ರಧಾನಿ ಮೋದಿ ಐದು ವರ್ಷಗಳ ವಿದೇಶ ಯಾತ್ರೆ ವೆಚ್ಚದ ಮಾಹಿತಿ ಬಹಿರಂಗ

ಪ್ರಧಾನಿ ನರೇಂದ್ರ ಮೋದಿ ಅಧಿಕೃತ ವಿದೇಶಿ ಭೇಟಿಗಳಿಗಾಗಿ ಮಾಡಿರುವ ವಿಮಾನ ಯಾನದ ವೆಚ್ಚ 443.4 ಕೋಟಿ ರೂ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧಿಕೃತ ವಿದೇಶಿ ಭೇಟಿಗಳಿಗಾಗಿ ಮಾಡಿರುವ ವಿಮಾನ ಯಾನದ ವೆಚ್ಚ 443.4 ಕೋಟಿ ರೂ. ಏರ್ ಇಂಡಿಯಾ ವೈಮಾನೈಕ ಸಂಸ್ಥೆ ಮೋದಿ ವಿದೇಶ ಪ್ರವಾಸಗಳಿಗಾಗಿ ಇಷ್ಟು ಮೊತ್ತದ ಬಿಲ್ ನೀಡಿದೆ. ಆದರೆ ಇದೇ ವೇಳೆ ಪ್ರಧಾನಿಯವರ ಇನ್ನೂ ಐದು ಸಾಗರೋತ್ತರ ಪ್ರವಾಸಗಳಿಗೆ ವೈಮಾನಿಕ ಸಂಸ್ಥೆ ಇನ್ನೂ ಶುಲ್ಕ ವಿಧಿಸಿಲ್ಲ.
ಪ್ರಧಾನ ಮಂತ್ರಿಗಳ ಕಛೇರಿ ನೀಡಿರುವ ಮಾಹಿತಿಯ ಪ್ರಕಾರ ಪ್ರಧಾನ ಮಂತ್ರಿಗಳ ಸಾಗರೋತ್ತರ ಭೇಟಿಗಳ ಸಂಖ್ಯೆ 44. ಅವರು  ಮೇ 2014ರಲ್ಲಿ ಪ್ರಧಾನಿಗಳಾದಂದಿನಿಂದ ಇದುವರೆಗೆ ಅವರು  44 ಅಂತರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದಾರೆ.ಈ ಎಲ್ಲಾ ಪ್ರವಾಸಗಳಿಗೆ ವೈಮಾನಿಕ ಸಂಸ್ಥೆ ಪ್ರಧಾನಿ ಕಛೇರಿಗೆ ಬಿಲ್ ಕಳಿಸುತ್ತದೆ ಹಾಗೂ ಈ ಹಣವನ್ನು ಸರ್ಕಾರದಿಂದ ಏರ್ ಇಂಡಿಯಾಗೆ ಪಾವತಿಸಲಾಗುತ್ತದೆ.
ಮೋದಿ ಇಷ್ಟೆಲ್ಲಾ ವಿದೇಶ ಪ್ರವಾಸ ಕೈಗೊಂಡಿದ್ದರೂ ಸಹ ಅವರ ನಿಕಟಪೂರ್ವ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ತಮ್ಮ ಎರಡನೇ ಅವಧಿ 2009-2014)ಯಲ್ಲಿ ವೈಮಾನಿಕ ಯಾನಕ್ಕಾಗಿ ಮಡಿದ ವೆಚ್ಚಕ್ಕಿಂತ ಇದು 50 ಕೋಟಿ ರು. ಕಡಿಮೆಯಾಗಿದೆ. ಸಿಂಗ್ ಅವರು ಆ ಅವಧಿಯಲ್ಲಿ 38  ವಿದೇಶ ಪ್ರವಾಸ ಕೈಗೊಂಡಿದ್ದರು. ಇದಕ್ಕಾಗಿ ಅವರಿಗೆ  493.2 ಕೋಟಿ ರು. ವೆಚ್ಚವಾಗಿತ್ತು.
ಮೋದಿ ಒಂದೇ ಬಾರಿಗೆ ಅನೇಕ ರಾಷ್ಟ್ರಗಳ ಪ್ರವಾಸ ಮಾಡುವುದರಿಂದಾಗಿ ಅವರ ವಿದೇಶ ಪ್ರವಾಸದಲ್ಲಿನ ಒಟ್ಟಾರೆ ಅಥವಾ ಸರಾಸರಿ ವೆಚ್ಚದಲ್ಲಿ ಇಳಿಕೆಯಾಗಿದೆ.ಅಲ್ಲದೆ ಮೋದಿ ತಮ್ಮ ಇತರೆ ಆರು ಅಂತರಾಷ್ಟ್ರೀಯ ಭೇಟಿಗಳಿಗಾಗಿ ಏರ್ ಇಂಡಿಯಾ ಬದಲಿಗೆ ಭಾರತೀಯ ವಾಯುಪಡೆಯ ವ್ಯಾಪಾರಿ ಜೆಟ್ ಬಳಕೆ ಮಾಡಿದ್ದಾರೆ. ಇದೂ ಸಹ ಅವರ ಒಟ್ಟಾರೆ ವಿದೇಶ ಪ್ರಯಾಣದ ವೆಚ್ಚ ಕಡಿತವಾಗಲು ಕಾರಣವಾಗಿತ್ತು. ಮೋದಿಯವರು ಬೋಯಿಂಗ್ 737 ವ್ಯಾಪಾರ ಜೆಟ್ ನಲ್ಲಿ ನೇಪಾಳ, ಬಾಂಗ್ಲಾದೇಶ, ಇರಾನ್ ಮತ್ತು ಸಿಂಗಾಪುರಕ್ಕೆ ಪ್ರಯಾಣಿಸಿದ್ದರು. ಆದರೆ ಸಿಂಗ್ ಅವರ ಅವಧಿಯಲ್ಲಿ ಬಾಂಗ್ಲಾದೇಶ, ಸಿಂಗಾಪುರದಂತಹಾ ರಾಷ್ಟ್ರಕ್ಕೆ ತೆರಳಲು ಸಹ ಏರ್ ಇಂಡಿಯಾವನ್ನೇ ಬಳಸಲಾಗುತ್ತಿತ್ತು.
ಈ ಪ್ರಯಾಣದ ವೆಚ್ಚವು ವಿಮಾನದ ಇಂಧನ ಭರ್ತಿ, ವಿಮಾನ ಸಿಬ್ಬಂದಿಯ ವೆಚ್ಚವನ್ನು ಒಳಗೊಂಡಿರುತ್ತದೆ. ಆದರೆ ಗಮ್ಯಸ್ಥಾನಗಳಲ್ಲಿ ಮಾಡಿದ ಖರ್ಚು, ವಿದೇಶಿ ಪ್ರವಾಸದಲ್ಲಿ ಮಾಡಲಾಗಿರುವ ಇತರೆ ಖರ್ಚನ್ನು ಇಲ್ಲಿ ಸೇರಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT