ದೇಶ

ಬಹುಕೋಟಿ ಮೇವು ಹಗರಣ: ಲಾಲುಪ್ರಸಾದ್ ಗೆ ಜಾಮೀನು ನಿರಾಕರಿಸಿದ ಸುಪ್ರಿಂಕೋರ್ಟ್

Shilpa D
ನವದೆಹಲಿ: ಬಹುಕೋಟಿ ಮೇವು ಹಗರಣದ ರೂವಾರಿ ಲಾಲೂ ಪ್ರಸಾದ್ ಯಾದವ್ ಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರನ್ನೊಳಗೊಂಡ ನ್ಯಾಯುಪೀಠ  ಲಾಲೂ ಗೆ ಜಾಮೀನು ನೀಡಲು ನಿರಾಕರಿಸಿದೆ,
ಕಳೆದ 24 ತಿಂಗಳಿಂದ ಜೈಲಿನಲ್ಲೇ ಇದ್ದು, ಹೀಗಾಗಿ ಜಾಮೀನು ನೀಡಬೇಕೆಂದು ಲಾಲೂ ಮನವಿ ಮಾಡಿದ್ದರು, ನಿಮಗೆ ವರ್ಷ ಜೈಲು ಶಿಕ್ಷೆಯಾಗಿದೆ, ಅದರಲ್ಲಿ 24ತಿಂಗಳು ಏನೇನು ದೊಡ್ಡದಲ್ಲ ಎಂದು ಕೋರ್ಟ್ ತಿಳಿಸಿದೆ, 
ಯಾದವ್ ಪರ ವಾದ ಮಂಡಿಸಿದ ವಕೀಲ್ ಕಪಿಲ್ ಸಿಬಲ್ ಪ್ರಕರಣ ಸಂಬಂಧ ಯಾವುದೇ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿಲ್ಲ, ಪಿತೂರಿಯಿಂದಾಗಿ ಅವರಿಗೆ ಜೈಲೂ ಶಿಕ್ಷೆಯಾಗಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಆರ್  ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಲು ಸಿಬಿಐ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಸುಪ್ರೀಂ ಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿದ್ದ ಸಿಬಿಐ, ಒಂದು ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಿದರೆ, ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಆರೋಪಿ ರಾಜಕೀಯ ಚಟುವಟಿಕೆಯಲ್ಲಿ ತೊಡಗುತ್ತಾರೆ ಎಂದು ಹೇಳಿತ್ತು.
SCROLL FOR NEXT