ರಾಹುಲ್ ಗಾಂಧಿ 
ದೇಶ

ಆತಂಕ ಬೇಡ, ಕೊಲೆ ಯತ್ನ ನಡೆದಿಲ್ಲ; ರಾಹುಲ್ ಹಣೆಗೆ ಬಿದ್ದ ಬೆಳಕು ಮೊಬೈಲ್‌ನದ್ದು: ಎಂಎಚ್ಎ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಲ್ಲಿ ನಾಮಪತ್ರ ಸಲ್ಲಿಸುವಾಗ ಭದ್ರತಾ ಲೋಪವಾಗಿದೆ ಎಂಬುದನ್ನು ಕೇಂದ್ರ ಗೃಹ ಸಚಿವಾಲಯ ಅಲ್ಲಗಳೆದಿದೆ.

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂಧಿ ಅಮೇಥಿಯಲ್ಲಿ ನಾಮಪತ್ರ  ಸಲ್ಲಿಸುವಾಗ ಭದ್ರತಾ ಲೋಪವಾಗಿದೆ ಎಂಬುದನ್ನು ಕೇಂದ್ರ ಗೃಹ ಸಚಿವಾಲಯ ಅಲ್ಲಗಳೆದಿದೆ. 
ಭದ್ರತಾ  ಕ್ರಮ ಉಲ್ಲಂಘನೆ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಪತ್ರ, ದೂರು ಸಚಿವಾಲಯಕ್ಕೆ ಬಂದಿಲ್ಲ, ಯಾವುದೇ ಭದ್ರತಾ ಲೋಪವೂ ಆಗಿಲ್ಲ ಎಂದು ಇಲಾಖೆಯ ವಕ್ತಾರ ಭರತ್ ಭೂಷಣ್  ಹೇಳಿದ್ದಾರೆ.
ವಿಶೇಷ ರಕ್ಷಣಾ ಪಡೆ(ಎಸ್‌ಜಿಪಿ) ಇದರ ಬಗ್ಗೆ ತನಿಖೆ ಮಾಡಿದೆ ಮತ್ತು ವೀಡಿಯೊ ದೃಶ್ಯಾವಳಿಯಲ್ಲಿನ ಹಸಿರು ಬೆಳಕು ಪ್ರದರ್ಶಿತವಾಗಿರುವುದು ಅಮೇಥಿಯಲ್ಲಿ ಪಕ್ಷದ ಛಾಯಾಚಿತ್ರಗ್ರಾಹಕರೊಬ್ಬರು ಬಳಸಿದ ಮೊಬೈಲ್ ಫೋನ್ ನಿಂದ ಎಂದು ಸ್ಪಷ್ಟಪಡಿಸಲಾಗಿದೆ.  
ಕಾಂಗ್ರೆಸ್  ಅಧ್ಯಕ್ಷ ರಾಹುಲ್ ಗಾಂಧಿಯವರ ಭದ್ರತೆ ಉಲ್ಲಂಘನೆ ಕುರಿತು ಗೃಹ ಕಚೇರಿಗೆ ಯಾವುದೇ ಪತ್ರವೂ ಈವರೆಗೆ ಬಂದಿಲ್ಲ. ಹಸಿರು ಲೇಸರ್‌ ಬೆಳಕಿನ ತನಿಖೆ ಇಲ್ಲವೇ ಪರಿಶೀಲನೆ ಮಾಡುವಂತೆ  ಸೂಚಿಸಲಾಗಿತ್ತು. ಅದರ ಪ್ರಕಾರ ಹಸಿರು ಬೆಳಕು ಪಕ್ಷದ ಛಾಯಾಗ್ರಾಹಕ ಬಳಸುವ ಮೊಬೈಲ್ ಫೋನಿಂದ ಬಂದಿದೆ ಎಂಬುದು ಗೊತ್ತಾಗಿದೆ. ಮೇಲಾಗಿ ಯಾವುದೆ ಭದ್ರತಾ ಲೋಪವಾಗಿಲ್ಲ ಎಂದು  ಸ್ಪಷ್ಟಪಡಿಸಲಾಗಿದೆ. 
ಘಟನೆಯ ತನಿಖೆಯ ಬಗ್ಗೆ  ಕಾಂಗ್ರೆಸ್ ಅಧ್ಯಕ್ಷರ ಆಪ್ತ ಸಿಬ್ಬಂದಿಗೆ ಈ ವಿಷಯ ತಿಳಿಸಲಾಗಿದೆ. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ ಎಂದು ಎಸ್‌ಪಿಜಿ  ನಿರ್ದೇಶಕರು ದೃಢಪಡಿಸಿದ್ದಾರೆ.
ಕಾಂಗ್ರೆಸ್  ಅಧ್ಯಕ್ಷೆ ರಾಹುಲ್ ಗಾಂಧಿ ಅವರು ನಿನ್ನೆ ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡುವ ಸಮಯದಲ್ಲಿ ಭದ್ರತಾ ಲೋಪವಾಗಿದೆ. ಇದರ ಬಗ್ಗೆ ಕೇಂದ್ರ  ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ಕಾಂಗ್ರೆಸ್ ಪತ್ರ ಬರೆದಿದೆ ಎಂದು ಈ ಮೊದಲು ಹೇಳಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video