ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಆರ್ ಬಿಐ ನೌಕರರು ಸರ್ಕಾರಿ ಸೇವಕರಲ್ಲ!

ರಿಸರ್ವ್ ಬ್ಯಾಂಕ್ ನ ನೌಕರರು ಸರ್ಕಾರಿ ಸೇವಕರಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಆರ್ ಬಿಐ ನೌಕರರು ಸರ್ಕಾರಿ ಸೇವಕರಲ್ಲ!
Srinivas Rao BV
Updated On : 15 Apr 2019, 6:36 am
ಚೆನ್ನೈ: ರಿಸರ್ವ್ ಬ್ಯಾಂಕ್ ನ ನೌಕರರು ಸರ್ಕಾರಿ ಸೇವಕರಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. 
ನ್ಯಾ.ಕೆ.ಕೆ ಶಶಿಧರನ್ ಹಾಗೂ ಪಿ.ಡಿ ಆದಿಕೇಶವುಲು ಅವರಿದ್ದ ವಿಭಾಗೀಯ ಪೀಠ, ಈ ತೀರ್ಪು ನೀಡಿದೆ. " ಆರ್ ಬಿಐ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ ಎಂದ ಮಾತ್ರಕ್ಕೆ ಆರ್ ಬಿಐ ನ ನೌಕರರು  ಕೇಂದ್ರ ಸರ್ಕಾರದ ನೌಕರರಾಗಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 
ತಮಿಳುನಾಡು ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಿದ್ದ ಆರ್ ಬಿಐ ನೌಕರರಾಗಿದ್ದ ಇ.ಮನೋಜ್ ಕುಮಾರ್ ಡಿವೈಎಸ್ ಪಿ ಹುದ್ದೆಗೆ ಆಯ್ಕೆಗೊಂಡಿದ್ದರು. ಆದರೆ ಅವರು ಅರ್ಜಿಯಲ್ಲಿ ತಾನು ಸರ್ಕಾರೇತರ ನೌಕರನೆಂದು ನಮೂದಿಸಿದ್ದರು. ಆರ್ ಬಿಐ ನೌಕರರಾಗಿದ್ದುಕೊಂಡು ಸರ್ಕಾರೇತರ ನೌಕರ ಎಂದು ನಮೂದಿಸಿದ್ದ ಹಿನ್ನೆಲೆಯಲ್ಲಿ ಅವರ ಪರೀಕ್ಷಾ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಫಲಿತಾಂಶ ತಡೆಹಿಡಿದಿರುವುದನ್ನು ಪ್ರಶ್ನಿಸಿ ಮನೋಜ್ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದರು. 

Advertisement

Advertisement

ಈಗ ಕೋರ್ಟ್ ಆರ್ ಬಿಐ ನೌಕರರು ಸರ್ಕಾರಿ ಸೇವಕರಲ್ಲ ಎಂದು ತೀರ್ಪು ನೀಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments