ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಶ್ರೀಲಂಕಾ ಸರಣಿ ಸ್ಪೋಟ: ಕಾಲಿವುಡ್ ನಟಿ ರಾಧಿಕಾ ಶರತ್ ಕುಮಾರ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

ಈಸ್ಟರ್ ದಿನವೇ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಚರ್ಚ್, ಹೋಟೆಲ್ ಗಳ ಮೇಲೆ ಏಕಕಾಲದಲ್ಲಿ ನಡೆದ ಬಾಂಬ್ ಸ್ಟೋಟದಿಂದಾಗಿ 150 ಜನರು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಾಧಿಕಾ ಶರತ್ ಕುಮಾರ್
Nagaraja AB
Updated On : 21 Apr 2019, 3:54 am

ಕೊಲಂಬೊ: ಈಸ್ಟರ್ ದಿನವೇ  ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಚರ್ಚ್, ಹೋಟೆಲ್ ಗಳ ಮೇಲೆ ಏಕಕಾಲದಲ್ಲಿ ನಡೆದ ಬಾಂಬ್ ಸ್ಟೋಟದಿಂದಾಗಿ 150 ಜನರು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸ್ಟೋಟ ಸಂಭವಿಸಿದ್ದ ಹೋಟೆಲ್ ಗಳಲ್ಲಿ ಒಂದಾದ ಸಿನ್ನಾಮಾನ್ ಗ್ರಾಂಡ್ ಹೋಟೆಲ್ ನಲ್ಲಿದ್ದ ಕಾಲಿವುಡ್ ನಟಿ ರಾಧಿಕಾ ಶರತ್ ಕುಮಾರ್ , ಕೂದಲೆಳೆ ಅಂತರದಲ್ಲಿ ಅಪಾಯದಿಂದ  ಪಾರಾಗಿದ್ದಾರೆ. ಬಾಂಬ್ ಸ್ಟೋಟ ಸಂವಿಸುವ ಕೆಲವೇ ನಿಮಿಷದ ಮುಂಚೆ ಆಕೆ ಆ ಹೋಟೆಲ್ ನಿಂದ ಹೊರಗೆ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಹೇಳಿದ್ದಾರೆ.

ಕೊಲಂಬೊದಲ್ಲಿನ ಚಿನ್ನಾಮೊನ್ ಗ್ರಾಂಡ್ ಹೋಟೆಲ್ ನಿಂದ ನಿರ್ಗಮಿಸಿದ ಕೆಲ ಹೊತ್ತಿನಲ್ಲಿ ಬಾಂಬ್ ಸ್ಟೋಟ ಸುದ್ದಿ ಕೇಳಿ ಶಾಂಕ್ ಆಗಿದೆ.  ದೇವರ ದಯೆಯಿಂದ ನಾವೆಲ್ಲಾ ಅಪಾಯದಿಂದ ಪಾರಾಗಿರುವುದಾಗಿ ರಾಧಿಕಾ ಶರತ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಈಸ್ಟರ್ ದಿನವಾದ ಇಂದು ಬೆಳಗ್ಗೆ 8-45ರ ಸುಮಾರಿನಲ್ಲಿ ಚರ್ಚ್ ಗಳಲ್ಲಿ ಸಾಮೂಹಿಕ ಪಾರ್ಥನೆ ನಡೆಯುತ್ತಿದ್ದ ವೇಳೆಯಲ್ಲಿ ಶ್ರೀಲಂಕಾದ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ಬಾಂಬ್ ಸ್ಟೋಟ ಸಂಭಿಸಿದೆ ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಕೆರಾ ಹೇಳಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments