ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮೂವರು ಮಕ್ಕಳು, ಮಡದಿ ಕೊಂದು ತಪ್ಪೊಪ್ಪಿಗೆ ವಿಡಿಯೋ ಕಳುಹಿಸಿದ ಸಾಫ್ಟ್ ವೇರ್ ಎಂಜಿನೀಯರ್!

32 ವರ್ಷದ ನಿರುದ್ಯೋಗಿ ಸಾಫ್ಟ್ ವೇರ್ ಎಂಜಿನೀಯರ್ ತನ್ನ ಮೂವರು ಮಕ್ಕಳು ಹಾಗೂ ಪತ್ನಿಯನ್ನು ಕೊಂದು ನಂತರ ತಪ್ಪೊಪ್ಪಿಗೆ ವಿಡಿಯೋವನ್ನು ...

ಸಾಂದರ್ಭಿಕ ಚಿತ್ರ
Shilpa D
Updated On : 22 Apr 2019, 1:36 am
ಘಾಜಿಯಾಬಾದ್: 32 ವರ್ಷದ ನಿರುದ್ಯೋಗಿ ಸಾಫ್ಟ್ ವೇರ್ ಎಂಜಿನೀಯರ್ ತನ್ನ ಮೂವರು ಮಕ್ಕಳು ಹಾಗೂ ಪತ್ನಿಯನ್ನು ಕೊಂದು ನಂತರ ತಪ್ಪೊಪ್ಪಿಗೆ ವಿಡಿಯೋವನ್ನು ವಾಟ್ಸಾಪ್ ನಲ್ಲಿ ಸಂಬಂಧಿಕರಿಗೆ ಕಳುಹಿಸಿರುವ ಧಾರುಣ ಘಟನೆ ಘಾಜಿಯಾಬಾದ್ ನಲ್ಲಿ ನಡೆದಿದೆ. 
34 ವರ್ಷದ ಸುಮೀತ್ ಕುಮಾರ್ ತನ್ನ ಮಡದಿ ಮಕ್ಕಳನ್ನು ಕೊಂದು , ತಪ್ಪೊಪ್ಪಿಗೆ ವಿಡಿಯೋವನ್ನು ಫ್ಯಾಮಿಲಿ ಗ್ರೂಪ್ ಗೆ ವಾಟ್ಸಾಪ್ ಮಾಡಿ ಪರಾರಿಯಾಗಿದ್ದಾನೆ ಎಂದು ಪತ್ರಿಕೆ ವರದಿ ಮಾಡಿದೆ.
ವಿಷಯ ತಿಳಿದ ಕುಮಾರ್ ಸಹೋದರಿ ಮತ್ತು ಆಕೆಯ ಪತಿ ಪಂಕಜ್ ಸಿಂಗ್ ಅಪಾರ್ಟ್ ಮೆಂಟ್ ಗೆ ಓಡಿ ಬಂದು ಬಾಗಿಲು ತೆರೆಯಲು ಯತ್ನಿಸಿದ್ದಾರೆ, ಆದರೆ ಬಾಗಿಲು ತೆಗೆಯಲು ಸಾಧ್ಯವಾಗದಿದ್ದಾಗ ಪೊಲೀಸರಿಗೆ ತಿಳಿಸಿ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಅವರು ಬಾಗಿಲು ಮುರಿದು ಒಳಬಂದಾಗ  ಮಕ್ಕಳು ಮತ್ತು ಕುಮಾರ್ ಪತ್ನಿ ಗಾಯಗೊಂಡು ಬಿದ್ದಿದ್ದರು.

Advertisement

Advertisement

ಕುಮಾರ್ ಪತ್ನಿ ಅಂಶು ಬಾಲಾ, ಐದು ವರ್ಷದ ಮಗು ಪ್ರಥಮೇಶ್, ನಾಲ್ಕು ವರ್ಷದ ಅವಳಿ ಮಕ್ಕಳಾದ ಆಕೃತಿ ಮತ್ತು ಆರವ್ ಮೃತ ದುರ್ದೈವಿಗಳು. ಅಂಶು ಪ್ಲೇ ಸ್ಕೂಲ್ ನಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಆಕೆಯ ಪತಿ ಕುಮಾರ್ ಡಿಸೆಂಬರ್ ನಲ್ಲೆ ಕೆಲಸ ಬಿಟ್ಟು ಮನೆಯಲ್ಲಿದ್ದ ಎಂದು ಅವರ ಸಂಬಂಧಿಗಳು ತಿಳಿಸಿದ್ದಾರೆ. 
ಅಂಶು ಪೋಷಕರು ಕೂಡ ಇವರ ಜೊತೆಯಲ್ಲಿಯೇ ವಾಸಿಸುತ್ತಿದ್ದರು. ಆದರೆ ಸಂಬಂದಿಕರ ಮದುವೆಯ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ತೆರಳಿದ್ದರು, ಹಣಕಾಸಿನ ಸಮಸ್ಯೆಯಿಂದಾಗಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments