ದೇಶ

ಲಂಕಾ ಸ್ಫೋಟದಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 11 ಕ್ಕೆ ಏರಿಕೆ

Srinivas Rao BV
ಕೊಲಂಬೋ: ಈಸ್ಟರ್ ಭಾನುವಾರದಂದು ಶ್ರೀಲಂಕಾದಲ್ಲಿ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅಸುನೀಗಿದ ವಿದೇಶಿಗರ ಸಂಖ್ಯೆ 36  ಕ್ಕೆ ಏರಿಕೆಯಾಗಿದೆ. 
ಈ ಘಟನೆಯಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಹೇಳಿದೆ. ಬಾಂಗ್ಲಾ, ಚೀನಾ, ಭಾರತ, ಡೆನ್ಮಾರ್ಕ್, ಜಪಾನ್, ನೆದರ್ಲ್ಯಾಂಡ್, ಪೋರ್ಚುಗಲ್, ಸೌದಿ ಅರೇಬಿಯಾ, ಸ್ಪೇನ್, ಟರ್ಕಿ, ಯುಕೆ, ಯುಎಸ್ಎ, ಆಸ್ಟ್ರೇಲಿಯಾದ ಜನರು ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. 
14 ವಿದೇಶಿಗರ ಗುರುತನ್ನು ಸರಿಯಾಗಿ ಈ ವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅವರ ಶರೀರಗಳನ್ನು ಇನ್ನೂ ಗುರುತಿಸಲಾಗದ ಸಂತ್ರಸ್ತರ ಶವಗಳೊಂದಿಗೆ ಇರಿಸಲಾಗಿದೆ ಎಂದು ಲಂಕಾ ಸರ್ಕಾರ ಮಾಹಿತಿ ನೀಡಿದೆ. 
SCROLL FOR NEXT