ಐಎಎಫ್ ಸಿ -17 
ದೇಶ

ಕಣಿವೆಯಲ್ಲಿ ಉಗ್ರರ ಭೀತಿ: ಐಎಎಫ್‌ನ ಸಿ -17 ಬಳಸಿ ಅಮರನಾಥ ಯಾತ್ರಾರ್ಥಿಗಳ ಸ್ಥಳಾಂತರ

ಅಮರನಾಥ ಯಾತ್ರಾ ಯಾತ್ರಿಕರನ್ನು ಕಾಶ್ಮೀರ ಕಣಿವೆಯಿಂದ ಜಮ್ಮು, ಪಠಾಣ್‌ಕೋಟ್ ಅಥವಾ ದೆಹಲಿಯಂತಹ ಸ್ಥಳಗಳಿಗೆ ಕಳಿಸಿ ಅವರನ್ನು ಮನೆಗೆ ಸುರಕ್ಷಿತವಾಗಿ ಹಿಂದಿರುಗಲು....

ಶ್ರೀನಗರ: ಅಮರನಾಥ ಯಾತ್ರಾ ಯಾತ್ರಿಕರನ್ನು ಕಾಶ್ಮೀರ ಕಣಿವೆಯಿಂದ ಜಮ್ಮು, ಪಠಾಣ್‌ಕೋಟ್ ಅಥವಾ ದೆಹಲಿಯಂತಹ ಸ್ಥಳಗಳಿಗೆ ಕಳಿಸಿ ಅವರನ್ನು ಮನೆಗೆ ಸುರಕ್ಷಿತವಾಗಿ ಹಿಂದಿರುಗಲು ಸಹಾಯ ಮಾಡುವಂತೆ ಕಾಶ್ಮೀರ ಸರ್ಕಾರ  ಭಾರತೀಯ ವಾಯುಪಡೆಗೆ ಮನವಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಅಮರನಾಥ ಯಾತ್ರಾ ಯಾತ್ರಾರ್ಥಿಗಳಿಗೆ ತಮ್ಮ ತೀರ್ಥಯಾತ್ರೆ ನಿಲ್ಲಿಸಿ ಸಾಧ್ಯವಾದಷ್ಟು ಬೇಗ ರಾಜ್ಯದಿಂದ ಹೊರಹೋಗುವಂತೆ ಸಲಹೆ ನೀಡಿದೆ. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಸೇರಿದಂತೆ ಭಯೋತ್ಪಾದಕ ಗುಂಪುಗಳು ಯಾತ್ರಾರ್ಥಿಗಳು ಮತ್ತು ರಾಜ್ಯದಲ್ಲಿನ  ಭದ್ರತಾ ಪಡೆಗಳ ವಿರುದ್ಧ ಮುಷ್ಕರ ನಡೆಸಲು ಮಾಡಿದ ಪ್ರಯತ್ನಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
"ಯಾತ್ರಾರ್ಥಿಗಳನ್ನು ತಮ್ಮ ಸಿ -17 ಸಾರಿಗೆಯಲ್ಲಿ ಕಾಶ್ಮೀರ ಕಣಿವೆಯಿಂದ ಹೊರಗೆ ಕರೆದೊಯ್ಯಲು ಐಎಎಫ್‌ಗೆ ರಾಜ್ಯ ಸರ್ಕಾರದಿಂದ ಮನವಿ ಸ್ವೀಕರಿಸಿದ್ದೇವೆ." ಸರ್ಕಾರಿ ಮೂಲಗಳು ಎಎನ್‌ಐಗೆ ತಿಳಿಸಿವೆ.
ಭಾರತೀಯ ವಾಯುಪಡೆಗೆ ಸೇರಿದ ಸಿ -17 ಗಳು ಈಗಾಗಲೇ ಕಣಿವೆಯಲ್ಲಿ ಮುನ್ನೆಚ್ಚರಿಕೆ ನಿಯೋಜನೆಗಾಗಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಅರೆಸೈನಿಕ ಪಡೆಗಳಿಗೆ ಒಂದೆಡೆ ನುಗ್ಗಲು ಅನುಕೂಲವಾಗುವಂತೆ ಂಆಡಿದೆ.ಈ ಸಿ -17 ಗ್ಲೋಬ್‌ಮಾಸ್ಟರ್  ಮೂಲಕ ಒಂದೇ ಪ್ರಯಾಣದಲ್ಲಿ ಸುಮಾರು 230 ಪ್ರಯಾಣಿಕರನ್ನು ಸ್ಥಳಾಂತರಿಸಬಹುದಾಗಿದೆ.ಇವು ರಷ್ಯಾದ ಇಲ್ಯುಶಿನ್ -76 ಗಿಂತ ಕಡಿಮೆ ಸಮಯದಲ್ಲಿ ಒಂದೆಡೆಯಿಂದ ಇನ್ನೊಂದು ಪ್ರದೇಶಕ್ಕೆ ತೆರಳುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ನಗದು ದೋಚಿ ಪರಾರಿ!

SCROLL FOR NEXT