ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಮಸೂದೆಯ ಚರ್ಚೆ 
ದೇಶ

ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಮಸೂದೆಯ ಚರ್ಚೆ

ಲೋಕಸಭೆಯಲ್ಲಿ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಗದ್ದಲ ಸೃಷ್ಟಿಸಿದ ಬೆನ್ನಲ್ಲೇ ಗದ್ದಲದ ನಡುವೆಯೇ ಲೈಂಗಿಕ ಅಲ್ಪಸಂಖ್ಯಾತ ಜನರು (ಹಕ್ಕುಗಳ ರಕ್ಷಣೆ ) ಮಸೂದೆ 2019ರ ಕುರಿತು ಚರ್ಚೆ ನಡೆಯಿತು.

ನವದೆಹಲಿ: ಲೋಕಸಭೆಯಲ್ಲಿ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ಗದ್ದಲ ಸೃಷ್ಟಿಸಿದ ಬೆನ್ನಲ್ಲೇ ಗದ್ದಲದ ನಡುವೆಯೇ ಲೈಂಗಿಕ ಅಲ್ಪಸಂಖ್ಯಾತ ಜನರು (ಹಕ್ಕುಗಳ ರಕ್ಷಣೆ ) ಮಸೂದೆ 2019ರ ಕುರಿತು ಚರ್ಚೆ ನಡೆಯಿತು.
ಈ ಮಸೂದೆ ಲೈಂಗಿಕ ಅಲ್ಪಸಂಖ್ಯಾತರಿಗೆ ತಮ್ಮ ಗುರುತನ್ನು ವ್ಯಾಖ್ಯಾನಿಸಲು ಹಾಗೂ ಅವರ ಮೇಲಿನ ತಾರತಮ್ಯವನ್ನು ನಿಗ್ರಹಿಸುವ ಹಕ್ಕು ನೀಡುತ್ತದೆ. ಈ ಮಸೂದೆಯನ್ನು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ರಾಜ್ಯ ಸಚಿವ ಕ್ರಿಷನ್ ಪಾಲ್ ಗುರ್ಜರ್ ಮಂಡಿಸಿದರು. ಚರ್ಚೆಯ ವೇಳೆ ವಿಪಕ್ಷ ನಾಯಕರು ಸದನದ ಪಡಸಾಲೆಗೆ ಆಗಮಿಸಿ ಕಾಶ್ಮೀರ ವಿವಾದ ಕುರಿತು ಪ್ರತಿಭಟನೆ ನಡೆಸಿದರು. 'ಪ್ರಧಾನ ಮಂತ್ರಿಗಳೇ ಉತ್ತರ ನೀಡಿ' ಎಂದು ಘೋಷಣೆ ಕೂಗಿದರು. ಕಾಂಗ್ರೆಸ್, ಡಿಎಂಕೆ ಹಾಗೂ ಎಐಟಿಸಿ ಸದಸ್ಯರ ಪ್ರತಿಭಟನೆಯಿಂದ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು. 
ಎಐಟಿಸಿ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಅವರು,  ಮೊದಲು ಕಾಶ್ಮೀರ ಕುರಿತ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಕೋರಿದರು. ಸದನ ವ್ಯವಸ್ಥಿತವಾಗಿಲ್ಲದ್ದರಿಂದ ಕಾಶ್ಮೀರದ ವಿವಾದದ ಕುರಿತೇ ಚರ್ಚೆ ನಡೆಯಲಿ ಎಂದರು. 
ಆದರೂ, ಅದಕ್ಕೆ ಲಕ್ಷ್ಯ ಕೊಡದ ಸ್ಪೀಕರ್, ಇನ್ನೋರ್ವ ಸದಸ್ಯರಿಗೆ ಮಸೂದೆ ಕುರಿತು ಹೇಳಿಕೆ ನೀಡುವಂತೆ ಸೂಚಿಸಿದರು. ಈ ಮಸೂದೆ ಲೈಂಗಿಕ ಅಲ್ಪಸಂಖ್ಯಾತರಿಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಬಲತೆ ಒದಗಿಸುತ್ತದೆ. ಇದು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚಿನ ಜವಾಬ್ದಾರಿ ನೀಡುವುದರ ಜೊತೆಗೆ, ನಿಯಮ ಉಲ್ಲಂಘನೆಗೆ ಉತ್ತರದಾಯಿಯನ್ನಾಗಿಸುತ್ತದೆ. 
ಇದು ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಸೇವೆಯ ಕ್ಷೇತ್ರಗಳಲ್ಲಿ ಇವರ ಮೇಲಿನ ತಾರತಮ್ಯ ತೊಡೆಯುವ ಜೊತೆಗೆ, ಈ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚಿಸುತ್ತದೆ. ಜೊತೆಗೆ ಮಸೂದೆಯು ಲೈಂಗಿಕ ಅಲ್ಪಸಂಖ್ಯಾತರ ದೂರು ಪರಿಹಾರ ಯೋಜನೆಯೊಂದಿಗೆ ಲೈಂಗಿಕ ಅಲ್ಪಸಂಖ್ಯಾತರ ರಾಷ್ಟ್ರೀಯ ಪರಿಷತ್ತನ್ನು ಕೂಡ ಆರಂಭಿಸುವ ಪ್ರಸ್ತಾವನೆಯನ್ನು ಒಳಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT