ದೇಶ

ಆರ್ಟಿಕಲ್ 370 ರದ್ದು: ಶಾಹಿದ್‌ ಅಫ್ರಿದಿಗೆ ಗೌತಮ್‌ ಗಂಭೀರ್‌ ತಿರುಗೇಟು

Vishwanath S
ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಪ್ರಕಾರ ನೀಡಿದ್ದ ವಿಶೇಷ ಸ್ಥಾನಮಾನವನ್ನು ಸೋಮವಾರ ಕೇಂದ್ರ ಸರ್ಕಾರ ರದ್ದುಗೊಳಿಸಿದ್ದ ಬೆನ್ನಲ್ಲೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹೀದ್‌ ಅಫ್ರಿದಿ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿ ವಿಶ್ವಸಂಸ್ಥೆ ಹಾಗೂ ಅಮೆರಿಕ ಮಧ್ಯೆ ಪ್ರವೇಶಿಸಬೇಕು ಎಂದು ಟ್ವೀಟ್‌ ಮಾಡಿದ್ದರು. 
ಸೋಮವಾರ ಜಮ್ಮು ಕಾಶ್ಮೀರದಲ್ಲಿ 370 ಮತ್ತು 35 ಎ ವಿಧಿಯನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಪುನರ್‌ವಿಂಗಡನೆ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿದ ಕೆಲವೇ ಗಂಟೆಗಳ ನಂತರ ಶಾಹೀದ್ ಅಫ್ರಿದಿ ಈ ಕುರಿತು ಟ್ವೀಟ್‌ ಮಾಡಿದ್ದರು. ಇದಕ್ಕೆ ಸಂಸದ ಗೌತಮ್‌ ಗಂಭೀರ್‌ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. 
ವಿಶ್ವಸಂಸ್ಥೆಯನ್ನು ಏಕೆ ರಚಿಸಲಾಗಿದೆ? ಇದೀಗ ಅದು ಏಕೆ ನಿದ್ರಿಸುತ್ತಿದೆ? ಮಾನವೀಯತೆಯ ವಿರುದ್ಧ ಕಾಶ್ಮೀರದಲ್ಲಿ ನಡೆಯುತ್ತಿರುವ ಅಪ್ರಚೋದಿತ ಆಕ್ರಮಣ ಮತ್ತು ಅಪರಾಧಗಳನ್ನು ಗಮನಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಬೇಕು” ಎಂದು ಸೋಮವಾರ ಅಫ್ರಿದಿ ಟ್ವೀಟ್‌ ಮಾಡಿದ್ದರು. 
ಇದಕ್ಕೇ ಸಂಸದ ಗೌತಮ್‌ ಗಂಭೀರ್‌ ತಿರುಗೇಟು ನೀಡಿ, " ಕಣಿವೆ ರಾಜ್ಯದಲ್ಲಿ ಅಪ್ರಚೋದಿತ ಆಕ್ರಮಣ ನಡೆಯುತ್ತಿದ್ದು, ಮಾನವೀಯತೆಯ ವಿರುದ್ಧ ಅಪರಾಧಗಳು ನಡೆಯುತ್ತಿವೆ. ಈ ವಿಷಯಗಳ ಪರಿಹರಿಸುವ ನಿಟ್ಟಿನಲ್ಲಿ ಅಫ್ರಿದಿ ಧನಿ ಎತ್ತಲಿ ಎಂದು ಹೇಳಿದ್ದಾರೆ.
“ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ” ಇವೆಲ್ಲವೂ ನಡೆಯುತ್ತಿದೆ ಎಂದು ಹೇಳುವುದನ್ನು ಮರೆತಿದ್ದೇನೆ. ಚಿಂತಿಸಬೇಡಿ, ಇದನ್ನು ಬಗೆಹರಿಸುತ್ತೇವೆ ಮಗನೇ!!! ” ಎಂದು ಖಾರವಾಗಿ ಅಫ್ರಿದಿಗೆ ಗಂಭಿರ್‌ ತಿರುಗೇಟು ನೀಡಿದ್ದಾರೆ.
SCROLL FOR NEXT