ನರೇಂದ್ರ ಮೋದಿ 
ದೇಶ

ಜಮ್ಮು ಕಾಶ್ಮೀರ, ಲಡಾಖ್ ನ ಯಾವುದೇ ಸಮಸ್ಯೆ, ಅದು ನಮ್ಮ ಸಮಸ್ಯೆ: ಪ್ರಧಾನಿ ಮೋದಿ

"ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳ ರಾಜವಂಶದ ಆಡಳಿತವು ಯುವಕರನ್ನು ರಾಜಕೀಯ ನಾಯಕತ್ವದಿಂದ ದೂರವಾಗುವಂತೆ ಮಾಡಿತು. ಈಗ ನನ್ನ ಜಮ್ಮು ಕಾಶ್ಮೀರ ಯುವಕರು ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸುತ್ತಾರೆ ಮತ್ತು ಪ್ರದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ.

"ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳ ರಾಜವಂಶದ ಆಡಳಿತವು ಯುವಕರನ್ನು ರಾಜಕೀಯ ನಾಯಕತ್ವದಿಂದ ದೂರವಾಗುವಂತೆ ಮಾಡಿತು. ಈಗ ನನ್ನ ಜಮ್ಮು ಕಾಶ್ಮೀರ  ಯುವಕರು ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸುತ್ತಾರೆ ಮತ್ತು ಪ್ರದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ.
ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಸಾಗಿದೆ.
"ನೀವು ಇದನ್ನು ಕೇಳಿದರೆ ಅಚ್ಚರಿಗೊಳ್ಳುವಿರಿ! ದಶಕಗಳಿಂದ ಜಮ್ಮು ಮತ್ತು ಕಾಶ್ಮೀರದ ಲಕ್ಷ ಲಕ್ಷ ಸಂಖ್ಯೆಯ ಜನರಿಗೆ  ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕಿದೆ ಆದರೆ ಅವರಿಗೆವಿಧಾನಸಭೆ / ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಅಥವಾ  ಮತ ಚಲಾಯಿಸಲು ಸಾಧ್ಯವಾಗಿರಲಿಲ್ಲ. 1947 ರಲ್ಲಿ ವಿಭಜನೆಯ ನಂತರ ಭಾರತಕ್ಕೆ ಬಂದವರ ಪಾಲಿಗೆ ಈ ಅನ್ಯಾಯ ಸರಿಯೆ?
"ನಾನು ಅದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ, ನಿಮ್ಮ ಪ್ರತಿನಿಧಿಯನ್ನು ನಿಮ್ಮಿಂದ ಆಯ್ಕೆ ಮಾಡಲಾಗುತ್ತದೆ, ನಿಮ್ಮ ಪ್ರತಿನಿಧಿ ನಿಮ್ಮ ನಡುವೆ ಇರಲಿದ್ದಾರೆ. ನಗೆ ಸಂಪೂರ್ಣ ನಂಬಿಕೆ ಇದೆ, ಈ ಹೊಸ ವ್ಯವಸ್ಥೆಯಡಿಯಲ್ಲಿ ನಾವೆಲ್ಲರೂ ಜಮ್ಮು ಮತ್ತು ಕಾಶ್ಮೀರವನ್ನು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದಿಂದ ಮುಕ್ತಗೊಳಿಸಲು ಸಾಧ್ಯವಾಗುತ್ತದೆ, "ಪಿಎಂ ಹೇಳಿದರು.
"ಜಮ್ಮು ಮತ್ತು ಕಾಶ್ಮೀರದ ದೇಶಭಕ್ತ ಜನರು ಪಾಕಿಸ್ತಾನದ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಪಿತೂರಿಯ ವಿರುದ್ಧ ನಿಂತಿದ್ದಾರೆ.
"ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ, ಜಮ್ಮು ಕಾಶ್ಮೀರ ಮತ್ತು ಲಡಾಖ್ ಜನರ ಯಾವುದೇ ಸಮಸ್ಯೆ ಕೂಡ ನಮ್ಮ ಸಮಸ್ಯೆಯಾಗಿದೆ. ಅವರ ಸಂತೋಷದ ಕ್ಷಣಗಳಲ್ಲಿ ಮತ್ತು ಅವರ ದುಃಖದ ಕ್ಷಣಗಳಲ್ಲಿ ನಾವು ಅವರೊಂದಿಗೆ ಇದ್ದೇವೆ.
"ಈದ್ ಹಬ್ಬದ ಹತ್ತಿರದಲ್ಲಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಶುಭ ಹಾರೈಸುತ್ತೇನೆ. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಈದ್ ಆಚರಿಸುವಲ್ಲಿ ಯಾವುದೇ ತೊಂದರೆಯಾಗದೆಂದು ನಾವು ಖಚಿತಪಡಿಸುತ್ತೇವೆ. ಕಾಶ್ಮೀರದಿಂದ ಬೇರೆಡೆ ವಾಸಿಸುವವರು ಮತ್ತು ಈದ್ ಆಚರಣೆಗೆ ಕಾಶ್ಮೀರಕ್ಕೆ ಆಗಮಿಸುವವರು ಸಹ ನಮ್ಮ ನೆರವನ್ನು ಹೊಂದಲಿದ್ದಾರೆ.
"ಜಮ್ಮು ಕಾಶ್ಮೀರ ಮತ್ತು ಲಡಾಖ್ ವಿಶ್ವದ ಅತಿದೊಡ್ಡ ಪ್ರವಾಸಿ ಕೇಂದ್ರವಾಗಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಕಾಶ್ಮೀರವು ಬಾಲಿವುಡ್ ಚಲನಚಿತ್ರ ತಯಾರಕರ ನೆಚ್ಚಿನ ತಾಣವಾಗಿದ್ದ ಕಾಲವೊಂದಿತ್ತು, ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರಗಳನ್ನೂ ಸಹ ಅಲ್ಲಿ  ಚಿತ್ರೀಕರಿಸಬೇಕಿದೆ.ಹಾಗೆ ಪರಿಸ್ಥಿತಿ ಬದಲಾಗಲಿದೆ ಎಂದು ನನಗೆ ವಿಶ್ವಾಸವಿದೆ."  ಪ್ರಧಾನಿ ಹೇಳಿದರು. - 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT