ದೇಶ

ಶಂಕಾಸ್ಪದ ವ್ಯಕ್ತಿಗಳನ್ನೀಗ 'ಉಗ್ರ'ನೆಂದು ಘೋಷಿಸಬಹುದು: ಯುಎಪಿಎ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

Raghavendra Adiga
ನವದೆಹಲಿ: ಸಂಶಯಾಸ್ಪದ ವ್ಯಕ್ತಿಗಳನ್ನು ಉಗ್ರರೆಂದು ಘೋಷಿಸಲು, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಲಲು ಅವಕಾಶ ಕಲ್ಪಿಸುವ ಕೇಂದ್ರ ಸರ್ಕಾರದ ಮಹತ್ವದ ಕಾನೂನು ಯುಎಪಿಎ ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ, 2019ಗೆ ರಾಷ್ಟ್ರಪತಿ ಕೋವೆಂದ್ ಒಪ್ಪಿಗೆ ಸೂಚಿಸಿದ್ದು ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಿದ ನಂತರ ಅವರ ಮೇಲೆ ಪ್ರಯಾಣ ನಿಷೇಧ ಹೇರಲು ಸಹ ಈ ಕಾನೂನಿನಡಿ ಅವಕಾಶವಿರಲಿದೆ.
ಗುರುವಾರ ತಡರಾತ್ರಿ ರಾಷ್ಟ್ರಪತಿಗಳು ಈ ಶಾಸನಕ್ಕೆ ತಮ್ಮ ಒಪ್ಪಿಗೆ ನೀಡಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರ ನಿಗ್ರಹಕ್ಕೆ ಸಂಬಂಧಿಸಿದ ಈ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಜುಲೈ 24 ರಂದು ಮತ್ತು ರಾಜ್ಯಸಭೆ ಆಗಸ್ಟ್ 2 ರಂದು ಅಂಗೀಕರಿಸಿತು.ಭಾರತದ ಮೋಸ್ಟ್ ವಾಂಟೆಡ್, ಲಷ್ಕರ್-ಎ-ತೈಬಾ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಅವರುಗಳನ್ನು ಈ ಕಾಯ್ದೆಯಡಿಯಲ್ಲಿ ಭಯೋತ್ಪಾದಕರೆಂದು ಘೋಷಿಸಲ್ಪಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ತಿದ್ದುಪಡಿಗಳು ಭಯೋತ್ಪಾದಕರ  ಆಸ್ತಿಗಳನ್ನು ಲಗತ್ತಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮಹಾನಿರ್ದೇಶಕರಿಗೆ ಅಧಿಕಾರವನ್ನು ನೀಡುತ್ತವೆ.
SCROLL FOR NEXT