ದೇಶ

ನಿಮ್ಮ ಆಹ್ವಾನ ಒಪ್ಪಿಕೊಂಡಿದ್ದೇನೆ, ಯಾವಾಗ ಬರಲಿ; ರಾಜ್ಯಪಾಲರಿಗೆ ರಾಹುಲ್ ಗಾಂಧಿ ಪ್ರಶ್ನೆ 

Sumana Upadhyaya

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ಭೇಟಿ ಮಾಡಲು ಮತ್ತೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಮನವಿ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಾವು ಯಾವಾಗ ಬರಲಿ ಎಂದು ಕೇಳಿದ್ದಾರೆ.


ಯಾವುದೇ ಷರತ್ತು ಇಲ್ಲದೆ ಜಮ್ಮು-ಕಾಶ್ಮೀರ ಜನರನ್ನು ಭೇಟಿ ಮಾಡಲು ತಾವು ರಾಜ್ಯಪಾಲರ ಆಹ್ವಾನವನ್ನು ಒಪ್ಪಿಕೊಂಡಿದ್ದು ಅದಕ್ಕೆ ಗವರ್ನರ್ ಅವರ ಪ್ರತಿಕ್ರಿಯೆ ಪೇಲವವಾಗಿದೆ ಎಂದಿದ್ದಾರೆ.


ಯಾವುದೇ ಷರತ್ತುಗಳಿಲ್ಲದೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಎಂಬ ನಿಮ್ಮ ಮನವಿಯನ್ನು ನಾನು ಸ್ವೀಕರಿಸಿದ್ದೇನೆ. ನಾನು ಯಾವಾಗ ಬರಲಿ ಎಂದು ಕೇಳಿದ್ದಾರೆ.


ಕಾಶ್ಮೀರಕ್ಕೆ ಭೇಟಿ ನೀಡಲು ರಾಹುಲ್ ಗಾಂಧಿ ಷರತ್ತು ಹಾಕುತ್ತಿದ್ದಾರೆ ಅಲ್ಲದೆ ವಿರೋಧಪಕ್ಷದ ನಾಯಕರ ನಿಯೋಗ ಕರೆತಂದು ಅನಿಶ್ಚಿತತೆ ಉಂಟುಮಾಡಲು ನೋಡುತ್ತಿದ್ದಾರೆ ಎಂದು ನಿನ್ನೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಆರೋಪಿಸಿದ್ದರು. 


ಕಾಶ್ಮೀರದಲ್ಲಿ ಹಿಂಸಾಚಾರವಾಗುತ್ತಿದೆ ಎಂದು ವರದಿ ಬಂದಿದೆ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ, ನಿಮಗೆ ಬೇಕಾದರೆ ವಿಮಾನ ಕಳುಹಿಸುತ್ತೇನೆ, ಇಲ್ಲಿಗೆ ಬಂದು ವಾಸ್ತವ ನೋಡಿ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ತಿರುಗೇಟು ನೀಡಿದ್ದರು.
ಗೃಹ ಬಂಧನದಲ್ಲಿರುವ ನಾಯಕರನ್ನು ಭೇಟಿ ಮಾಡುವುದು ಸೇರಿದಂತೆ ಹಲವು ಷರತ್ತುಗಳನ್ನು ಒಡ್ಡಿ ಕಾಶ್ಮೀರಕ್ಕೆ ಭೇಟಿ ಮಾಡಲು ರಾಹುಲ್ ಗಾಂಧಿ ಮುಂದಾಗಿದ್ದಾರೆ ಎಂದು ಸತ್ಯಪಾಲ್ ಮಲಿಕ್ ಆರೋಪಿಸಿದ್ದರು.

SCROLL FOR NEXT