ದೇಶ

ಕರ್ನಾಟಕದ ವೀರಯೋಧ ಪ್ರಕಾಶ್ ಜಾಧವ್ ಗೆ ಕೀರ್ತಿ ಚಕ್ರ

Lingaraj Badiger

ನವದೆಹಲಿ: ದೇಶದ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತೀಯ ಸೇನೆಯ 111 ವೀರ ಯೋಧರಿಗೆ ಶೌರ್ಯ ಪ್ರಶಸ್ತಿ ಪ್ರಕಟಿಸಲಾಗಿದ್ದು, ಕರ್ನಾಟಕದ ವೀರಯೋಧ ಪ್ರಕಾಶ್ ಜಾಧವ್ ಅವರು ಮರಣೋತ್ತರ ಕೀರ್ತಿ ಚಕ್ರ  ಗೌರವಕ್ಕೆ ಪಾತ್ರರಾಗಿದ್ದಾರೆ. ಸ್ವಾತಂತ್ರ್ಯೋತ್ಸವ  ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
   
ರಾಷ್ಟ್ರೀಯ ರೈಫಲ್ಸ್ (ಮಹಾರ್) ನ ಕರ್ನಾಟಕದ ನಿಪ್ಪಾಣಿ ತಾಲೂಕಿನ ಸಪ್ಪರ್ ಪ್ರಕಾಶ್ ಜಾಧವ್ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ನೀಡಲಾಗಿದೆ. ಅವರು ಕಳೆದ ವರ್ಷ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದರ ಜೊತೆಗೆ ಧೈರ್ಯದಿಂದ ಕಾದಾಡಿ ಹುತಾತ್ಮರಾಗಿದ್ದರು.
   
ಪತ್ನಿ ಹಾಗೂ ಮಗಳನ್ನು ಅಗಲಿರುವ ಪ್ರಕಾಶ್ ಜಾಧವ್(29)  2007ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು.

ರೈಫಲ್ ಮ್ಯಾನ್ ಔರಂಗಜೇಬ್ ಮತ್ತು ಮೇಜರ್ ಆದಿತ್ಯ ಕುಮಾರ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರವನ್ನು ನೀಡಲಾಗುವುದು. ಸೇನಾ ಸಿಬ್ಬಂದಿಗಾಗಿ ಎಂಟು ಶೌರ್ಯ ಚಕ್ರ ಮತ್ತು 98 ಸೇನಾ ಪದಕ(ಶೌರ್ಯ) ಹಾಗೂ ಕಾರ್ಯಾಚರಣೆಯ ಸ್ಥಳದಲ್ಲಿ ವಿಶಿಷ್ಟ ಹಾಗೂ ಪ್ರಶಂಸನೀಯ ಸೇವೆಗಾಗಿ 4 ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

SCROLL FOR NEXT