ದೇಶ

ಹುತಾತ್ಮ ಯೋಧನ ಪತ್ನಿಗೆ ರಕ್ಷಾ ಬಂಧನಕ್ಕಾಗಿ ಮನೆ ಉಡಗೊರೆ ನೀಡಿದ ಯುವಕರು!

Shilpa D

ಭೂಪಾಲ್: ಗಡಿ ಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಮೋಹನ್ ಲಾಲ್ ಸುನೇರ್ 1992ರ ಡಿಸೆಂಬರ್ 31 ರಂದು ತ್ರಿಪುರಾದಲ್ಲಿ ಹುತಾತ್ಮರಾಗಿದ್ದರು. 

ರಕ್ಷಾ ಬಂಧನ ಹಾಗೂ ಸ್ವಾತಂತ್ರ್ಯೋತ್ಸವದ ಉಡುಗೊರೆಯಾಗಿ ಹುತಾತ್ಮ ಯೋಧನ ಪತ್ನಿಗೆ ಇಂದೋರ್ ಜಿಲ್ಲೆಯ ಬೆಟ್ಮಾ ಪ್ರದೇಶದ ಪಿಪಿಲಿಯಾ ಗ್ರಾಮದಲ್ಲಿ ಹೊಸದಾಗಿ ಮನೆ ನಿರ್ಮಿಸಿಕೊಡಲಾಗಿದೆ.

ಗ್ರಾಮದ ಯುವಕರು ಹಣ ಸಂಗ್ರಹಿಸಿ ಈ ಮಹತ್ವದ ಕಾರ್ಯ ನಿರ್ವಹಿಸಿದ್ದಾರೆ, ಇದರಿಂದಾಗಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಹುತಾತ್ಮ ಯೋಧನ ಕುಟುಂಬ ಹೊಸ ಮನೆಗೆ ಶಿಫ್ಟ್ ಆಗಿದೆ. 

ಮೋಹನ್ ನಾರಾಯಣ್ ಎಂಬುವರ ನೇತೃತ್ವದಲ್ಲಿ ಸುಮಾರು 20 ಯುವಕರು, 2018 ರ ರಕ್ಷಾ ಬಂಧನದ ದಿನ ವಚನ ನೀಡಿದ್ದರು, ಗ್ರಾಮದಲ್ಲಿ ಹುತಾತ್ಮ ಯೋಧನ ಪ್ರತಿಮೆ ಹಾಗೂ ಆತನ ಕುಟುಂಬಕ್ಕೆ ಮನೆ ನಿರ್ಮಿಸಲು ಪ್ರತಿಜ್ಞೆ ಮಾಡಿದ್ದರು. ಅದಕ್ಕಾಗಿ ಹಣ ಸಂಗ್ರಹಿಸಿ ಹೊಸ ಮನೆ ನಿರ್ಮಿಸಿಕೊಟ್ಟಿದ್ದಾರೆ.

ಮೂರು ತಿಂಗಳಲ್ಲಿ 11 ಲಕ್ಷ ಹಣ ಸಂಗ್ರಹಿಸಿ 8 ತಿಂಗಳಲ್ಲಿ ಮನೆ ನಿರ್ಮಿಸಿದ್ದಾರೆ, ಮನೆ ನಿರ್ಮಾಣಕ್ಕೆ 10 ಲಕ್ಷ ಹಾಗೂ ಹಾಗೂ ಉಳಿದ 1 ಲಕ್ಷ ರು.ಹಣವನ್ನು ಗ್ರಾಮದಲ್ಲಿ ಪ್ರತಿಮೆ ಸ್ತಾಪಿಸಲು ಬಳಸುವುದಾಗಿ ತಿಳಿಸಿದ್ದಾರೆ.

ಗುರುವಾರ ತಮ್ಮ ಸಹೋದರಿ ಹಾಗೂ ಹುತಾತ್ಮ ಯೋಧನ ಪತ್ನಿ ರಾಜು ಬಾಯ್ ಅವರಿಗೆ ಹೊಸ ಮನೆಯ ಕೀಯನ್ನು ಹಸ್ತಾಂತರಿಸಿದ್ದಾರೆ, ಯುವಕರ ಈ ಕಾರ್ಯವನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಶ್ಲಾಘಿಸಿದ್ದಾರೆ. 

SCROLL FOR NEXT