ಮೂಲ ಮಿಗ್ -21 ಯುದ್ಧ ವಿಮಾನ ಡಿಸೆಂಬರ್ನಲ್ಲಿ ಹಂತ-ಹಂತವಾಗಿ ನಿವೃತ್ತಿ
ರಷ್ಯಾ ಮೂಲದ ಮಿಗ್ -21 ಯುದ್ಧ ವಿಮಾನದ ಮೇಲ್ದರ್ಜೆಗೆ ಏರಿಸಲಾಗದಿರುವ ಆವೃತ್ತಿಯನ್ನು ಈ ವರ್ಷದ ಡಿಸೆಂಬರ್ ನಲ್ಲಿ ಹಂತ-ಹಂತವಾಗಿ ನಿವೃತ್ತಿಗೊಳಿಸಲಾಗುವುದು
ನವದೆಹಲಿ: ರಷ್ಯಾ ಮೂಲದ ಮಿಗ್ -21 ಯುದ್ಧ ವಿಮಾನದ ಮೇಲ್ದರ್ಜೆಗೆ ಏರಿಸಲಾಗದಿರುವ ಆವೃತ್ತಿಯನ್ನು ಈ ವರ್ಷದ ಡಿಸೆಂಬರ್ ನಲ್ಲಿಹಂತ-ಹಂತವಾಗಿ ನಿವೃತ್ತಿಗೊಳಿಸಲಾಗುವುದು ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಎಂದು ಮಂಗಳವಾರ ಹೇಳಿದ್ದಾರೆ.
'ಮಿಗ್ 21 ಎಮ್ಎಫ್ ಆವೃತ್ತಿ 44 ವರ್ಷಗಳನ್ನು ಪೂರ್ಣಗೊಳಿಸಿದೆ. ಇದನ್ನು ಡಿಸೆಂಬರ್ ವೇಳೆಗೆ ಹಂತಹಂತವಾಗಿ ಕೈಬಿಡಲಾಗುವುದು. ಸೆಪ್ಟೆಂಬರ್ ನಲ್ಲಿ ಈ ವಿಮಾನದಲ್ಲಿ ಕೊನೆಯ ಹಾರಾಟ ನಡೆಸುತ್ತೇನೆ.' ಎಂದು ಧನೋವಾ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಿಗ್-21 ಯುದ್ಧ ವಿಮಾನ ನಾಲ್ಕು ದಶಕಗಳಿಂದ ಸೇವೆಯಲ್ಲಿರುವುದಕ್ಕೆ ಧನೋವಾ ಅವರು ಹಿಂದೂಸ್ತಾನ್ ವಿಮಾನ ಕಾರ್ಖಾನೆ (ಎಚ್;ಎಎಲ್) ಅನ್ನು ಶ್ಲಾಘಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.