ದೇಶ

ಐಎನ್ ಎಕ್ಸ್ ಮೀಡಿಯಾ ಹಗರಣ: ಹೈಡ್ರಾಮಾ ನಡುವೆ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಬಂಧನ

Srinivas Rao BV

ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಬಂಧನವಾಗಿದೆ. 

24 ಗಂಟೆಗಳ ನಾಪತ್ತೆ ನಂತರ ಕಾಂಗ್ರೆಸ್ ಕಚೇರಿಯಲ್ಲಿ ಪ್ರತ್ಯಕ್ಷರಾಗಿದ್ದ ಚಿದಂಬರಂ ಅವರ ದೆಹಲಿ ನಿವಾಸಕ್ಕೆ ತೆರಳಿದ ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ಬಂಧಿಸಿದ್ದಾರೆ. 

ಸುದ್ದಿಗೋಷ್ಠಿಯ ನಂತರ ಸಿಬಿಐ, ಇಡಿ ಅಧಿಕಾರಿಗಳು ಪೊಲೀಸರ ನೆರವಿನಿಂದ ಚಿದಂಬರಂ ಅವರ ಮನೆಯನ್ನು ಪ್ರವೇಶಿಸಿದ್ದರು. ಈ ಬಳಿಕ ಚಿದಂಬರಂ ಅವರನ್ನು ಸಿಬಿಐ ನ ಕೇಂದ್ರ ಕಚೇರಿಗೆ ಕರೆದೊಯ್ದು, ವಾರೆಂಟ್ ನೀಡಿ ಅಧಿಕೃತವಾಗಿ ಬಂಧಿಸಿದ್ದಾರೆ. ಆ.22 ರಂದು ಚಿದಂಬರಂ ಅವರನ್ನು ಸಿಬಿಐ ನ್ಯಾಯಾಲಯದ ಎದುರು ಹಾಜರುಪಡಿಸುವ ಸಾಧ್ಯತೆ ಇದೆ. 

ಬಂಧನಕ್ಕೂ ಮುನ್ನ ಚಿದಂಬರಂ ನಿವಾಸದ ಬಳಿ ಹೈಡ್ರಾಮ 

ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ವಶಕ್ಕೆ ಪಡೆಯುವುದಕ್ಕೂ ಮುನ್ನ ಹೈಡ್ರಾಮ ನಡೆದಿದೆ, ಸಿಬಿಐ ಅಧಿಕಾರಿಗಳು ಚಿದಂಬರಂ ಮನೆಗೆ ಪ್ರವೇಶಿಸಲು ಯತ್ನಿಸುತ್ತಿದ್ದಂತೆಯೇ ಗಲಾಟೆ ಪ್ರಾರಂಭವಾಗಿದ್ದು, ಪೊಲೀಸ್ ಅಧಿಕಾರಿಗಳ ನೆರವಿನಿಂದ ಸಿಬಿಐ ಅಧಿಕಾರಿಗಳು  ಹಿಂಬಾಗಿಲಿನ ಮೂಲಕ ಚಿದಂಬರಂ ಮನೆ ಪ್ರವೇಶಿಸಿದ್ದಾರೆ. ಮನೆಗೆ ಪ್ರವೇಶಿಸುತ್ತಿದ್ದಂತೆಯೇ ಸಿಬಿಐ ವಕೀಲರ ನೇತೃತ್ವದಲ್ಲಿ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ ಚಿದಂಬರಂ ಅವರನ್ನು ವಶಕ್ಕೆ ಪಡೆದಿದ್ದಾರೆ. 

SCROLL FOR NEXT