ಸಂಜಯ್ ದತ್ 
ದೇಶ

ದಶಕದ ಬಳಿಕ ಸಂಜಯ್ ದತ್ ಮತ್ತೆ ರಾಜಕೀಯಕ್ಕೆ: ಆರ್‌ಎಸ್‌ಪಿ ತೆಕ್ಕೆಗೆ ಬಾಲಿವುಡ್ ನಟ?

ಹತ್ತು ವರ್ಷಗಳ ಹಿಂದೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾ ಚೊಚ್ಚಲ ರಾಜಕೀಯ ಪ್ರವೇಶಕ್ಕೆ ಯತ್ನಿಸಿದ್ದ ಬಾಲಿವುಡ್ ನಟ ಸಂಜಯ್ ದತ್ ಉತ್ತರ ಪ್ರದೇಶದಿಂದ ಸ್ಪರ್ಧಿಸಲು ಮುಂದಾಗಿ ಕಾನೂನು ಅಡಚಣೆ ಕಾರಣ ಹಿಂದೆ ಸರಿದಿದ್ದರು.ಈಗ ಮತ್ತೆ ರಾಜಕೀಯ ಪ್ರವೇಶಕ್ಕೆ ಸಿದ್ದವಾಗಿದ್ದಾರೆ.

ಮುಂಬೈ: ಹತ್ತು ವರ್ಷಗಳ ಹಿಂದೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾ ಚೊಚ್ಚಲ ರಾಜಕೀಯ ಪ್ರವೇಶಕ್ಕೆ ಯತ್ನಿಸಿದ್ದ ಬಾಲಿವುಡ್ ನಟ ಸಂಜಯ್ ದತ್ ಉತ್ತರ ಪ್ರದೇಶದಿಂದ ಸ್ಪರ್ಧಿಸಲು ಮುಂದಾಗಿ ಕಾನೂನು ಅಡಚಣೆ ಕಾರಣ ಹಿಂದೆ ಸರಿದಿದ್ದರು.ಈಗ ಮತ್ತೆ ರಾಜಕೀಯ ಪ್ರವೇಶಕ್ಕೆ ಸಿದ್ದವಾಗಿದ್ದಾರೆ.

60 ರ ಹರೆಯದ ದತ್ ಸೆಪ್ಟೆಂಬರ್ 25 ರಂದು ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಸೇರಲು ಸಜ್ಜಾಗಿದ್ದಾರೆ ಎಂದು ಮಹಾರಾಷ್ಟ್ರದ ಸಚಿವರು, ಪಕ್ಷದ ಸಂಸ್ಥಾಪಕ ಮತ್ತು ಕ್ಯಾಬಿನೆಟ್ ಸಚಿವ ಮಹಾದೇವ್ ಜಂಕರ್ ಮುಂಬೈನಲ್ಲಿ ಹೇಳಿದ್ದಾರೆ.ಆರ್‌ಎಸ್‌ಪಿ ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷವಾಗಿದೆ.

ಮುಖ್ಯವಾಗಿ 'ಧಂಗರ್' ಅಥವಾ ಕುರುಬ ಸಮುದಾಯವನ್ನು ಪ್ರತಿನಿಧಿಸುವ ತಮ್ಮ ಪಕ್ಷವನ್ನು ವಿಸ್ತರಿಸಲು ಆರ್‌ಎಸ್‌ಪಿ ಚಿತ್ರೋದ್ಯಮದ ಗಣ್ಯರತ್ತ ಕಣ್ಣು ನೆಟ್ಟಿದೆ ಎಂದು ಜಂಕರ್ ಹೇಳಿದರು."... ನಮ್ಮ ಪಕ್ಷವನ್ನು ವಿಸ್ತರಿಸಲು ನಾವು ಚಲನಚಿತ್ರ ಕ್ಷೇತ್ರದವರತ್ತ ನೋಡುತ್ತಿದ್ದೇವೆ.  ಇದರ ಭಾಗವಾಗಿ ನಟ ಸಂಜಯ್ ದತ್ ಸೆಪ್ಟೆಂಬರ್ 25 ರಂದು ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಸೇರುತ್ತಿದ್ದಾರೆ" ಎಂದು ಪಶುಸಂಗೋಪನೆ ಮತ್ತು ಡೈರಿ ಅಭಿವೃದ್ಧಿ ಖಾತೆ ಸಚಿವರು ಹೇಳಿದ್ದಾರೆ.

ಭಾನುವಾರ ಪಕ್ಷದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಅದೇ ವೇಳೆ ದತ್ ಅವರ ವೀಡಿಯೋ ತುಣುಕೊಂದನ್ನು ಸಹ ಅವರು ಪ್ರಸ್ತುತಪಡಿಸಿದ್ದಾರೆ. ಅದರಲ್ಲಿ ನಟ ಆರ್‌ಎಸ್‌ಪಿ ಪಕ್ಷವನ್ನು ಹೊಗಳಿದ್ದಾರೆ ಹಾಗೂ ಜಂಕರ್ ಅವರನ್ನು ತಮ್ಮ "ಸಹೋದರ" ಎಂದು ಸಂಬೋಧಿಸಿದ್ದಾರೆ.

2014 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಆರ್‌ಎಸ್‌ಪಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Video: 'ಯಾರಾದ್ರೂ ಭಾರತದ ಮೇಲೆ ದಾಳಿ ಮಾಡಿದ್ರೆ..': ಸುದ್ದಿಗಾರನ ಪ್ರಶ್ನೆಗೆ ಅಚ್ಚರಿ ಉತ್ತರ ನೀಡಿದ Donald Trump

ಟ್ರಂಪ್-ಮೋದಿ ಮಾತುಕತೆ: ನಾವಿಕರ ಸಾವು ವಿಷಯ ಪ್ರಸ್ತಾಪ; ಇರಾನ್ ಒಪ್ಪಂದದಲ್ಲಿ ಸುರಕ್ಷತೆ ಸೇರಿಸಲು ಪ್ರಧಾನಿ ಒತ್ತಾಯ

'ಕೆಲಸ ಮಾಡಿ ಮುಗಿಸು ಎಂದಿದ್ದರು.. ಹೋಗಿ ಬಾ ಗೀತಮ್ಮ': ನಿರ್ದೇಶಕ ಪವನ್ ಒಡೆಯರ್ ತಾಯಿ ನಿಧನ, ಭಾವುಕ ಪೋಸ್ಟ್!

Cricket: ಭಾರತಕ್ಕೆ ಒಂದೇ ದಿನ 3 ಗೆಲುವು, ಆಫ್ಘಾನಿಸ್ತಾನ ವಿರುದ್ಧವೇ 2 ಜಯಭೇರಿ

Women's T20 World Cup 2026: ಭಾರತಕ್ಕೆ ಭಾರಿ ಆಘಾತ, Shreyanka Patil ಗೆ ಗಾಯ, ಕಣ್ಣೀರು ಹಾಕುತ್ತಲೇ ಹೊರ ನಡೆದ ಕನ್ನಡತಿ! ಆಗಿದ್ದೇನು?

SCROLL FOR NEXT