ದೇಶ

ಎಲ್ಒಸಿಯಲ್ಲಿ ಪಾಕಿಸ್ತಾನದ 100 ಕ್ಕೂ ಹೆಚ್ಚು ವಿಶೇಷ ಕಮಾಂಡೋಗಳ ನಿಯೋಜನೆ!

Nagaraja AB

ಜಮ್ಮು-ಕಾಶ್ಮೀರ: ಭಾರತೀಯ ಸೇನೆಯ ವಿರುದ್ಧ ಸಂಭಾವ್ಯ ದಾಳಿ ನಡೆಸುವ ನಿಟ್ಟಿನಲ್ಲಿ  ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ 100ಕ್ಕೂ ಹೆಚ್ಚು ವಿಶೇಷ ಕಮಾಂಡೋಗಳನ್ನು ಪಾಕಿಸ್ತಾನ ನಿಯೋಜಿಸಿದೆ.

 ಕಮಾಂಡೋಗಳ ಚಟುವಟಿಕೆಗಳನ್ನು ಭಾರತೀಯ ಸೇನೆ ಹತ್ತಿರದಿಂದ ಗಮನಿಸುತ್ತಿದೆ. ಈ ಕಮಾಂಡೋಗಳು ಜೈಷ್ -ಇ ಮೊಹಮ್ಮದ್ ಮತ್ತಿತರ ಉಗ್ರ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿರುವುದು ಕಂಡುಬಂದಿದೆ ಎಂದು ಸೇನಾಮೂಲಗಳು ತಿಳಿಸಿವೆ. 

ಪಾಕಿಸ್ತಾನ ಸೇನೆಯ ವಿಶೇಷ ಕಮಾಂಡೋಗಳು ಕದನ ವಿರಾಮ ಉಲ್ಲಂಘಿಸುತ್ತಿದ್ದಾರೆ. ಇದಕ್ಕೆ ಭಾರತೀಯ ಸೇನೆಯಿಂದ ತಕ್ಕ ಪ್ರತ್ಯುತ್ತರ ನೀಡುತ್ತಿರುವುದರಿಂದ ಗಾಯಗಳಿಂದ ನರುಳುವಂತಾಗಿದೆ. 

ಪಾಕಿಸ್ತಾನದ ಗಡಿಭಾಗದ ಸಿರ್ ಕ್ರೀಕ್ ಪ್ರದೇಶದ ಬಳಿ ಕಮಾಂಡೋಗಳನ್ನು ಪಾಕಿಸ್ತಾನ ನಿಯೋಜಿಸಿರುವುದನ್ನು ಭಾರತದ ತನಿಖಾ ಸಂಸ್ಥೆಗಳು ಗಮನಿಸಿವೆ. ಲೀಪಾ ಕಣಿವೆಯಲ್ಲಿ ಇತ್ತೀಚಿಗೆ ಸುಮಾರು 12 ಅಪ್ಘಾನ್ ಜಿಹಾದಿಗಳನ್ನು ಜೈಷ್ -ಇ- ಮೊಹಮ್ಮದ್ ಉಗ್ರ ಸಂಘಟನೆ ನಿಯೋಜಿಸಿದೆ ಎಂಬುದು ಗುಪ್ತಚರಗಳಿಂದ ತಿಳಿದುಬಂದಿದೆ. 

ಭಾರತದ ವಿರುದ್ಧ ದಾಳಿ ನಡೆಸಲು ಉಗ್ರರು ಪ್ರಯತ್ನಿಸುತ್ತಿದ್ದು, ಜೆಇಎಂ ಮುಖ್ಯಸ್ಥ ಮಸೂದ್ ಅಜಾರ್ ಸಹೋದರ ರೌಪ್ ಅಜಾರ್ ಆಗಸ್ಟ್ 19-20 ರಂದು ಬಾಹವಾಲ್ ಪುರದಲ್ಲಿ ಉಗ್ರಗಾಮಿಗಳು ಕಮಾಂಡೋಗಳೊಂದಿಗೆ ಚರ್ಚೆ ನಡೆಸಿದ್ದಾನೆ. 

ಭಾರತದ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸುತ್ತಿದ್ದಾರೆ. ಭಾರತದ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಅಪ್ಘಾನ್ ಉಗ್ರರನ್ನು ಪಾಕಿಸ್ತಾನ ನೇಮಕ ಮಾಡಿಕೊಳ್ಳುತ್ತಿದೆ. ಕಾಶ್ಮೀರದ ಸ್ಥಳೀಯ ಉಗ್ರರ ಬದಲಿಗೆ ಅಪ್ಘಾನ್ ಉಗ್ರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT