ಸಂಗ್ರಹ ಚಿತ್ರ 
ದೇಶ

ಕೇಂದ್ರ ಸಚಿವ ಸಂಪುಟ ಸಭೆ; ಮೋದಿ ಸಂಪುಟ ಸಭೆ ಕೈಗೊಂಡ ಪ್ರಮುಖ ನಿರ್ಣಯಗಳು

ನಿರೀಕ್ಷೆಯಂತೆ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ವೈದ್ಯಕೀಯ ಕಾಲೇಜು ಸ್ಥಾಪನೆ, ಗಣಿಗಾರಿಕೆಯಲ್ಲಿ ಶೇ.100ರಷ್ಟು ಎಫ್ ಡಿಐ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ನವದೆಹಲಿ: ನಿರೀಕ್ಷೆಯಂತೆೇ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ವೈದ್ಯಕೀಯ ಕಾಲೇಜು ಸ್ಥಾಪನೆ, ಗಣಿಗಾರಿಕೆಯಲ್ಲಿ ಶೇ.100ರಷ್ಟು ಎಫ್ ಡಿಐ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಇನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಪ್ರಮುಖ ನಿರ್ಣಯಗಳು ಇಂತಿವೆ.

  • 75 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮತಿ. 15,700 ಎಂಬಿಬಿಎಸ್ ಸೀಟು ಹೆಚ್ಚಳ. 2021-22ರ ಅವಧಿಯಲ್ಲಿ ಪೂರ್ಣಗೊಳ್ಳಲಿರುವ ವೈದ್ಯಕೀಯ ಕಾಲೇಜುಗಳ ನಿರ್ಮಾಣ ವೆಚ್ಚ 24,375 ಕೋಟಿ ರು.ಗೆ ಏರಿಕೆ
  • 2019-20 ಮಾರ್ಕೆಟಿಂಗ್ ವರ್ಷಕ್ಕೆ ಅನುಗುಣವಾಗಿ 6 ಮಿಲಿಟನ್ ಟನ್ ಸಕ್ಕರೆ ರಫ್ತು ಮಾಡಲು 6,268 ಕೋಟಿ ರು ಸಬ್ಸಿಡಿ ಮೊತ್ತ ಬಿಡುಗಡೆ. ಈ ಮೂಲಕ ಸಕ್ಕರೆ ಕಾರ್ಖಾನೆಗಳಿಂದ ಬೆಳೆಗಾರರಿಗೆ ಬಾಕಿ ಮೊತ್ತ ಪಾವತಿಯಾಗಲು ನೆರವು. ಸಕ್ಕರೆ ಕಾರ್ಖಾನೆಗಳಿಗೆ ರಫ್ತು ಸಬ್ಸಿಡಿ ರೂಪದಲ್ಲಿ 10,448 ರು ಪ್ರತಿ ಟನ್ ನಂತೆ ನೀಡಲಾಗುವುದು ಇದರಿಂದ ಸರ್ಕಾರದ ಬೊಕ್ಕಸಕ್ಕೆ 6,268 ಕೋಟಿರು ವೆಚ್ಚವಾಗಲಿದೆ. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರ ಕೈಗೊಂಡ ಕ್ರಮದ ಫಲವು ಉತ್ತರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮುಂತಾದ ಕಬ್ಬು ಬೆಳೆಯುವ ರಾಜ್ಯಗಳಿಗೆ ತಲುಪಲಿದೆ. ಭಾರತ ಸುಮಾರು 162 ಲಕ್ಷ ಟನ್ ಕಬ್ಬು ಹೊಂದಿದ್ದು, 60 ಲಕ್ಷ ಟನ್ ರಫ್ತು ಮಾಡಲಿದೆ.
  • ಮೂಲ ಸೌಕರ್ಯ ನಿರ್ವಹಣೆ, ಅಭಿವೃದ್ಧಿಗಾಗಿ International Coalition for Disaster Resilient Infrastructure(CDRI) ಸ್ಥಾಪನೆ. ಯುಎನ್ ಹವಾಮಾನ ಶೃಂಗಸಭೆಯಲ್ಲಿ ಸೆ.23ರಂದು ಅಧಿಕೃತ ಘೋಷಣೆ.
  • ಕಲ್ಲಿದ್ದಲು ಗಣಿಗಾರಿಕೆ, ಗುತ್ತಿಗೆ ಆಧಾರಿತ ಉತ್ಪಾದನಾ ಕ್ಷೇತ್ರದಲ್ಲಿ ಶೇ100ರಷ್ಟು ಎಫ್ ಡಿಐಗೆ ಅನುಮತಿ.
  • ಡಿಜಿಟಲ್ ಮಾಧ್ಯಮದಲ್ಲಿ ಶೇ26ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಒಪ್ಪಿಗೆ. ಇದರಿಂದಾಗಿ ಖಾಸಗಿ ಮಾಧ್ಯಮ (ಸುದ್ದಿ ಮತ್ತು ಮನರಂಜನೆ) ಆ್ಯಪ್ ಗಳನ್ನು ಪ್ರತ್ಯೇಕ ಸಂಸ್ಥೆಯಂತೆ ಪರಿಗಣಿಸಲಾಗುತ್ತದೆ. ಅಂಥಹ ಸಂಸ್ಥೆಗಳು ಪ್ರತ್ಯೇಕವಾಗಿ ಬಂಡವಾಳ ಹೂಡಿಕೆ ಪಡೆದುಕೊಳ್ಳಬಹುದು. ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಈಗಾಗಲೇ ಶೇ49.ರಷ್ಟು ಎಫ್ ಡಿಐಗೆ ಅನುಮತಿಯಿದೆ.
  • ಸಿಂಗಲ್ ಬ್ರ್ಯಾಂಡ್ ರಿಟೇಲ್ ವಲಯಕ್ಕೆ ಸ್ಥಳೀಯವಾದ ಉತ್ಪನ್ನಗಳನ್ನು ಖರೀದಿ ಮಾಡಬೇಕು ಎಂದಿರುವ ನಿಯಮದಲ್ಲಿ ಬದಲಾವಣೆ. ಯಾವ ಕಂಪೆನಿಯು ಶೇ50ಕ್ಕಿಂತ ಹೆಚ್ಚು ವಿದೇಶಿ ನೇರ ಬಂಡವಾಳ ಹೊಂದಿದೆಯೋ ಅಂಥದ್ದು ದೇಶಿ ಮಾರುಕಟ್ಟೆಯಿಂದ ಶೇ 30ರಷ್ಟು ಖರೀದಿ ಮಾಡಬೇಕು ಎಂಬ ನಿಯಮ ತೆಗೆದು ಹಾಕಲಾಗಿದೆ. ಈ ಮೂಲಕ ಆನ್ ಲೈನ್ ಸ್ಟೋರ್, ವಹಿವಾಟಿಗೆ ಉತ್ತೇಜನ.
  • ಕೇಂದ್ರ ಸಚಿವ ಸಂಪುಟವು 2019ರ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಯಲ್ಲಿ ತಿದ್ದುಪಡಿಗಳನ್ನು ಅನುಮೋದಿಸಿದೆ. ಅದು ಈಗ 14ರ ಬದಲು 22 ಅರೆಕಾಲಿಕ ಸದಸ್ಯರನ್ನು ಹೊಂದಿರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ವೈದ್ಯ ಆಯೋಗದ ಮಸೂದೆಯಲ್ಲಿನ ಇತರ ತಿದ್ದುಪಡಿಗಳಿಗೆ ಅನುಮತಿ ನೀಡಿತು. ಮಸೂದೆಯ ಮೂಲ ಆವೃತ್ತಿಯನ್ನು 2019 ರ ಜುಲೈ 17 ರಂದು ಕ್ಯಾಬಿನೆಟ್ ಅಂಗೀಕರಿಸಿತು ಮತ್ತು ಅಧಿಕೃತ ತಿದ್ದುಪಡಿಗಳೊಂದಿಗೆ ಕ್ರಮವಾಗಿ ಜುಲೈ 29, 2019 ಮತ್ತು ಆಗಸ್ಟ್ 1 ರಂದು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಲ್ಪಟ್ಟಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT