ದೇಶ

ಮಿದುಳು ನಿಷ್ಕ್ರಿಯ ಗೊಂಡ ಮಹಿಳೆಯಿಂದ ಮೂವರಿಗೆ ಹೊಸ ಬದುಕು ..!

Nagaraja AB

ಔರಂಗಬಾದ್:  ಅಪಘಾತದಲ್ಲಿ ಮಿದುಳು ನಿಷ್ಕ್ರಿಯ ಗೊಂಡ ಮಹಿಳೆ ಯೊಬ್ಬರು ತನ್ನ  ಮೂರು ಅಂಗಾಂಗಳನ್ನು ಮೂವರು ರೋಗಿಗಳಿಗೆ ದಾನ ಮಾಡಿ ಹೊಸ ಜೀವನ ಹೊಸ ಬದುಕು ಕಲ್ಪಿಸಿ ಸಾವಿನಲ್ಲೂ  ಜೀವನ ಸಾರ್ಥಕ ಪಡಿಸಿಕೊಂಡಿದ್ದಾರೆ.

ಆಗಸ್ಟ್ 23 ರಂದು ಖಮ್ಗಾಂವ್ ಬಳಿ ಪತಿಯೊಂದಿಗೆ ತೆರಳುತ್ತಿದ್ದಾಗ  ಅಪಘಾತಕ್ಕೀಡಾಗಿದ್ದ  ಮಹಿಳೆಯ ಮಿದುಳಿಗೆ ತೀವ್ರ ಪೆಟ್ಟು ಬಿದ್ದಿತ್ತು ಆಕೆಯ ಪರಿಶೀಲನೆ ನಂತರ  ವೈದ್ಯರು  'ಬ್ರೈನ್ ಡೆಡ್' ಎಂದು ಘೋಷಿಸಿದ್ದರು.ಆದರೆ ಆಕೆಯ 19 ವರ್ಷದ ಮಗಳು  ಅವರು ತಾಯಿಯ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದರು. 

ಮಗಳ  ಒಪ್ಪಿಗೆಯ ನಂತರ, ಅಂಗಾಂಗ ದಾನಕ್ಕಾಗಿ ವೈದ್ಯರು ಆರೋಗ್ಯ ಸೇವೆಗಳ ರಾಜ್ಯ ಸಹಾಯಕ ನಿರ್ದೇಶಕರ ಅನುಮತಿ ಕೋರಿದರು ಮತ್ತು ಎಲ್ಲಾ ಕಾನೂನುಬದ್ಧ ವಿಧಿವಿಧಾನಗಳನ್ನು ಬೇಗನೆ ಪೂರ್ಣಗೊಳಿಸಿ ನಂತರ  ಮಹಿಳೆಯ ಅಂಗಾಂಗಳನ್ನು  ಮೂವರು  ಬೇರೆ ರೋಗಿಗಳಿಗೆ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಿ  ರೋಗಿಗಳಿಗೆ ಹೊಸ ಜೀವನ ನೀಡಿದ್ದಾರೆ.

ಮಹಾರಾಷ್ಟ್ರದ ಹಿಂದುಳಿದ ಪ್ರದೇಶ ಎಂದು  ಗುರುತಿಸಿಕೊಂಡಿರುವ ಮರಾಠವಾಡವು ಅಂಗಾಂಗ ದಾನದಲ್ಲಿ ಮಾತ್ರ ಅಗ್ರಸ್ಥಾನದಲ್ಲಿದೆ, ಇತ್ತೀಚೆಗೆ ಕೆಲವೇ  ತಿಂಗಳ ಅವಧಿಯಲ್ಲಿ  ಕನಿಷ್ಠ 104 ರೋಗಿಗಳು ಅಂಗಾಂಗ ದಾನದ ಮೂಲಕ  ಹೊಸ ಜೀವನ ಸಾಗಿಸುತ್ತಿದ್ದಾರೆ.

SCROLL FOR NEXT