ದೇಶ

ಪೌರತ್ವ ಮಸೂದೆ ಮೂಲಕ ಭಾರತೀಯ ಸಂವಿಧಾನದ ಮೇಲೆ ದಾಳಿ: ರಾಹುಲ್ ಗಾಂಧಿ

Manjula VN

ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆ ಮೂಲಕ ಭಾರತೀಯ ಸಂವಿಧಾನದ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಪೌರತ್ವ ಮಸೂದೆಯೊಂದು ಭಾರತೀಯ ಸಂವಿಧಾನದ ಮೇಲಿನ ಆಕ್ರಮಣವಾಗಿದೆ. ಇದನ್ನು ಯಾರೇ ಬೆಂಬಲಿಸಿದರೂ ಅದೊಂದು ದಾಳಿ ಹಾಗೂ ನಮ್ಮ ದೇಶದ ಅಡಿಪಾಯದ ಮೇಲೆ ನಾಶಪಡಿಸುವ ಯತ್ನವಾಗಿದೆ ಎಂದು ಹೇಳಿದ್ದಾರೆ. 

ವಿವಾದಿತ ರಾಷ್ಟ್ರೀಯ ಪೌರತ್ವ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅಸ್ತು ಎಂದು ಹೇಳಿದೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನಗಳಲ್ಲಿನ ಧಾರ್ಮಿಕ ಉಪದ್ರವಗಳಿಂದ ಬೇಸತ್ತು, ಅಲ್ಲಿಂದ ಭಾರತಕ್ಕೆ ಬಂದಿರುವ ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತರಿಗೆ ಭಾರತೀಯ ಪೌರತ್ವ ಉದ್ದೇಶವು ಮಸೂದೆಗೆ ಇದೆ. ಇನ್ನು ವಿಧೇಯಕವು ರಾಜ್ಯಸಭೆಯಲ್ಲಿ ಮಂಡನೆಯಾಗಿ ಅಲ್ಲೂ ಅನುಮೋದನೆ ಪಡೆದುಕೊಂಡಿದ್ದೇ ಆದರೆ, ಇವರಿಗೆಲ್ಲಾ ಬಾರತೀಯ ಪೌರತ್ವ ಲಭಿಸಲಿದೆ. 

SCROLL FOR NEXT