ಕಾನ್ಪುರ: ಗಂಗಾ ಘಾಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಲು ಎಡವಿ ಮುಗ್ಗರಿಸಿ ಬಿದ್ದಿದ್ದಾರೆ.
ನಮಾಮಿ ಗಂಗಾ ಯೋಜನೆಯ ಪರಿಶೀಲನೆಗೆ ಉತ್ತರ ಪ್ರದೇಶದ ಕಾನ್ಪುರಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗಂಗಾ ಘಾಟ್ ಗೆ ತೆರಳಿದ್ದ ಮೋದಿ ಅವರು ಗಂಗಾ ನದಿಯಲ್ಲಿ ಸುಮಾರು 50 ನಿಮಿಷಗಳ ಕಾಲ ದೋಣಿ ವಿಹಾರ ನಡೆಸಿದ್ದರು. ನಂತರ ಈ ಘಟನೆ ನಡೆದಿದೆ.
ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದ ನಂತರ ಮೋದಿ ಸ್ವಚ್ಚತಾ ಕಾರ್ಯದ ಪ್ರಗತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ನಂತರ ನದಿ ತೀರಕ್ಕೆ ಇಳಿದ್ದರು. ನಂತರ ಮೆಟ್ಟಿಲು ಹತ್ತುವಾಗ ಎಡವಿ ಬಿದ್ದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಮೇಲಕ್ಕೆತ್ತಿದರು.